ಬೆಂಗಳೂರು,ಫೆಬ್ರವರಿ,24,2026 (www.justkannada.in): ಸಚಿವ ಸಂಪುಟ ಪುನರಚನೆ ಮಾಡಿ ಹೊಸ ಶಾಸಕರಿಗೂ ಅವಕಾಶ ನೀಡುವಂತೆ ಹೈಕಮಾಂಡ್ ಗೆ ಹೊಸ ಶಾಸಕರು ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ಪತ್ರಿಕೆಯಲ್ಲಿ ನೋಡಿದ್ದೇನೆ ನನಗೆ ಇನ್ನೂ ಪತ್ರ ತಲುಪಿಲ್ಲ. ಎಲ್ಲ ಶಾಸಕರಿಗೂ ಮಂತ್ರಿ ಆಗಬೇಕು ಎನ್ನುವ ಆಸೆ ಇರುತ್ತೆ. ಸಿಎಂ ಆಗದಿದ್ರೂ ಕೆಲವರು ಮಂತ್ರಿ ಆಗಿದ್ದವರು ಇದ್ದಾರೆ. ಶಾಸಕರೇ ಅಲ್ಲದಿದ್ದರೂ ಸಚಿವರಾದವರಿದ್ದಾರೆ ಅದಕ್ಕೆ ಶಾಸಕರು ಸಂಪುಟ ಪುನಾರಚನೆಗೆ ಬೇಡಿಕೆ ಇಟ್ಟಿದ್ದಾರೆ ಹೊಸ ಪೀಳಿಗೆ ಬೆಳೆಯಬೇಕು ಅಲ್ಲವಾ? ನಾನು ಮಂತ್ರಿ ಆಗಿ 36 ವರ್ಷ ಆಯಿತು ಹೊಸ ಜನರೇಷನ್ ಬರಬೇಕು ಹೊಸ ಆಲೋಚನೆ ಬರಬೇಕು. ಶಾಸಕರು ಕೇಳ್ತಾರೆ ಅವರು ಕೇಳೋದ್ರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.
ಸತೀಶ್ ಜಾರಕಿಹೊಳಿ ನಮ್ಮ ಹಿರಿಯ ನಾಯಕರು. ಅವರಿಗೆ ಪಕ್ಷದ ಬಗ್ಗೆ ಅಪಾರ ಚಿಂತನೆ ಇದೆ. ಸರ್ಕಾರ ವಾಪಸ್ ತರೀಕೆ ನಾವೆಲ್ಲಾ ಯೋಜನೆ ಮಾಡುತ್ತಿದ್ದೀವಿ ನಾವಿಬ್ಬರೂ ವಾರಕ್ಕೊಮ್ಮೆ ಮಾತನಾಡುತ್ತಿರುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: MLAs, Minister post, DCM, DK Shivakumar
The post ಶಾಸಕರು ಕೇಳೋದ್ರಲ್ಲಿ ತಪ್ಪೇನಿದೆ: ಹೊಸ ಪೀಳಿಗೆ ಬೆಳೆಯಬೇಕಲ್ವಾ..? ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




