ಧಾರವಾಡ,ಜುಲೈ,8,2025 (www.justkannada.in): ಕಾಂಗ್ರೆಸ್ ಶಾಸಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಭೆ ಬಗ್ಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಈ ಬಾರಿ ತಡವಾಯಿತು. ಪ್ರತಿ 6 ತಿಂಗಳಲ್ಲಿ ಅಥವಾ 1ವರ್ಷದಲ್ಲಿ ಸಭೆ ನಡೆಯುತ್ತದೆ. ಶಾಸಕರ ಕುಂದು ಕೊರತೆಗಳನ್ನ ಕೇಳೋದು ಅವರ ಕೆಲಸ.
ಸರ್ಕಾರ ಇಲ್ಲದಾಗಲೂ ಶಾಸಕರ ಕುಂದು ಕೊರತೆ ಕೇಳುತ್ತಾರೆ. ಇದು ಪಕ್ಷದ ಆಂತರಿಕ ಪ್ರಕ್ರಿಯೆ . ಇದಕ್ಕೆ ಬೇರೆ ಅರ್ಥ ಬೇಕಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
Key words: Ranadeep singh Surjewala, Meeting, MLAs, Minister, Lakshmi Hebbalkar
The post ಶಾಸಕರ ಜೊತೆ ಸುರ್ಜೇವಾಲ ಸಭೆ: ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.