ಮೈಸೂರು.ಜುಲೈ,19,2025 (www.justkannada.in): ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಅವರು ಇಂದು ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಳ್ಯಕ್ಕೆ ದಿಢೀರ್ ಭೇಟಿ ನೀಡಿ ಆಹಾರ ಧಾನ್ಯಗಳ ಪರಿಶೀಲನೆ ನಡೆಸಿದರು.
ಸಗಟು ಮಳಿಗೆ ಬಂಡಿಪಾಳ್ಯಕ್ಕೆ ಭೇಟಿ ನೀಡಿದ ಸಚಿವ ಮುನಿಯಪ್ಪ, ಅಕ್ಕಿ,ರಾಗಿಯ ಗುಣಮಟ್ಟದ ಕುರಿತು ಪರಿಶೀಲಿಸಿ ಉತ್ತಮವಾದ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.
ಸಗಟು ಮಳಿಗೆಯನ್ನು ಪರಿಶೀಲಿಸಿ ಸಗಟು ಮಳಿಗೆಯು ಗುಣಮಟ್ಟದ್ದಾಗಿದ್ದು ಉತ್ತಮವಾಗಿದೆ ಎಂದು ಸಿಬ್ಬಂದಿಗೆ ಪ್ರಶಂಸಿಸಿ ರಾಜ್ಯದ ಎಲ್ಲಾ ಸಗಟು ಮಳಿಗೆಗಳು ಈ ರೀತಿಯಲ್ಲಿ ಗುಣಮಟ್ಟವನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಗಟು ಮಳಿಗೆಯಲ್ಲಿ ಹಮಾಲಿ ಕೆಲಸಗಾರನ್ನು ಮಾತನಾಡಿಸಿ ಅವರ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಜಂಟಿ ಉಪ ನಿರ್ದೇಶಕ ಮಂಟೇಸ್ವಾಮಿ, ಸಗಟು ಮಳಿಗೆಯ ಸಹಾಯ ನಿರ್ದೇಶಕ ಕಿರಣ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Minister Muniyappa, visit, wholesale shop, Mysore
The post ಸಗಟು ಮಳಿಗೆಗೆ ಸಚಿವ ಮುನಿಯಪ್ಪ ದಿಢೀರ್ ಭೇಟಿ, ಪರಿಶೀಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.