16
March, 2026

A News 365Times Venture

16
Monday
March, 2026

A News 365Times Venture

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

Date:

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ ನಂ.1 ಸ್ವಚ್ಛನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿ ಅವಾರ್ಡ್  ಪಡೆದಿದೆ.   ಸ್ವಚ್ಛತಾ ಸಮೀಕ್ಷೆಯಲ್ಲಿ ಇಂದೋರ್  ಸತತ 8ನೇ ಬಾರಿಗೆ ಅಗ್ರಸ್ಥಾನ  ಪಡೆದಿದೆ.  ಗುಜರಾತ್ ​​ನ ಸೂರತ್ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಸಾಂಸ್ಕೃತಿಕ ನಗರಿ ಮೈಸೂರಿಗೆ 8ನೇ ಸ್ಥಾನ

ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಕರ್ನಾಟಕದ ಮೈಸೂರು ಪಟ್ಟಿಯ ಟಾಪ್​ 10 ರಲ್ಲಿ ಕಾಣಿಸಿಕೊಂಡಿದೆ.  1 ಲಕ್ಷಕ್ಕೂ ಅಧಿಕ ಜನರು ವಾಸಿಸುವ ನಗರಗಳ ಪಟ್ಟಿಯಲ್ಲಿ ಅರಮನೆ ನಗರಿ 8ನೇ ಸ್ಥಾನ ಪಡೆದಿದೆ. ಈ ಹಿಂದೆ ಒಂದು ವರ್ಷ ಮಾತ್ರ ಮೈಸೂರು ನಗರವು ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿತ್ತು. 2016 ರಲ್ಲಿ ದೇಶದಲ್ಲಿಯೇ ನಂಬರ್​ 1 ಸ್ಥಾನ ಪಡೆದಿದ್ದ ಮೈಸೂರು ಬಳಿಕ ಕುಸಿತ ಕಂಡಿತ್ತು. ಬಳಿಕ ಮೈಸೂರು ನಗರಕ್ಕೆ ನಂಬರ್ ಒನ್ ಕ್ಲೀನ್ ಸಿಟಿ ಪಟ್ಟ ಪಡೆಯಲು ಸಾಧ್ಯವಾಗಿಲ್ಲ. ಅದರಲ್ಲೂ 2023 ನೇ ಸಾಲಿನಲ್ಲಿ 27 ನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ 19 ಸ್ಥಾನ ಜಿಗಿದಿದೆ. ಇದೇ ಪಟ್ಟಿಯಲ್ಲಿ ಅವಳಿ ಜಿಲ್ಲೆಗಳಾದ ಹುಬ್ಬಳ್ಳಿ- ಧಾರವಾಡವು 82ನೇ ಕ್ರಮಾಂಕದಲ್ಲಿದೆ.vtu

Key words: Cleanliness survey, Cleanest City, Indore,  Mysore

The post ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

4,824 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ. ಬಿ. ಪಾಟೀಲ್

ಬೆಂಗಳೂರು,ಮಾರ್ಚ್,14,2026 (www.justkannada.in): ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ  13...

ಯುದ್ದದ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಕೆ, ಜನರಲ್ಲಿ ಆತಂಕ ಉಂಟು ಮಾಡಿದೆ- ಪ್ರಧಾನಿ ಮೋದಿ

ಅಸ್ಸಾಂ, ಮಾರ್ಚ್, 14,2026 (www.justkannada.in):  ಯುದ್ದದ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಕೆಗಳನ್ನ...

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಹೆಚ್.ವೈ.ಮೇಟಿ ಕನಸು ನನಸು-ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಮಾರ್ಚ್,14,2026 (www.justkannada.in):  ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು  ಆಶಯದಂತೆ  ಸರ್ಕಾರಿ...

ಗೂಡ್ಸ್ ರೈಲು ಡಿಕ್ಕಿ : ಮೂವರು ಯುವಕರು ಸಾವು.

ಮುಂಬೈ,ಮಾರ್ಚ್,14,2026 (www.justkannada.in):  ಗೂಡ್ಸ್ ರೈಲು ರೈಲು ಡಿಕ್ಕಿಯಾಗಿ ಮೂವರು ಯುವಕರು ಪ್ರಾಣ...