1
April, 2026

A News 365Times Venture

1
Wednesday
April, 2026

A News 365Times Venture

ಸಮರ್ಥ್ ಶಾಮನೂರು ಗೆದ್ರೆ ನನಗೆ ಶಕ್ತಿ ಬರುತ್ತದೆ- ಸಿಎಂ ಸಿದ್ದರಾಮಯ್ಯ

Date:

ದಾವಣಗೆರೆ,ಏಪ್ರಿಲ್,1,2026 (www.justkannada.in):  ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ದಾವಣಗೆರೆ ನಾಗನೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಸಿಎಂ ಸಿದ್ದರಾಮಯ್ಯ  ರೋಡ್ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅವರು, ದಾವಣಗೆರೆಗೆ ಶಾಮನೂರು ಕೊಡುಗೆ ಸಾಕಷ್ಟಿದೆ. ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲ್ಲುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ 1.43 ಲಕ್ಷ ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ.  ಸಮರ್ಥ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ ಎಂದರು.

ನಮ್ಮ ಮೂಲ ಉದ್ದೇಶ ತಳ ಸಮುದಾಯದ ಅಭಿವೃದ್ದಿ.  ಬಸವಣ್ಣ ಅವರ ಪರಿಕಲ್ಪನೆಯಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ಮಧ್ಯವರ್ತಿಗಳ ಕಾಟ ಇಲ್ಲದೆ ಬಡವರ ಖಾತೆಗೆ ಹಣ ಹಾಕುತ್ತಿದ್ದೇವೆ ಎಂದರು.

ಗ್ಯಾರಂಟಿಯಿಂದ ಖಜಾನೆ ಖಾಲಿ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ನಾವು 1.40 ಕೋಟಿ ರೂ ಸಾಲ ಮಾಡಿದ್ದೇವೆ. ಬಿಜೆಪಿಯವರು 5.30 ಲಕ್ಷ ಕೋಟಿಗೂ  ಹೆಚ್ಚು ಸಾಲ ಮಾಡಿದ್ದಾರೆ ಎಂದರು.

Key words: Samarth Shamanur, Davanagere by-election, CM Siddaramaiah

The post ಸಮರ್ಥ್ ಶಾಮನೂರು ಗೆದ್ರೆ ನನಗೆ ಶಕ್ತಿ ಬರುತ್ತದೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯದ ಹಣಕಾಸಿನ ಸ್ಥಿತಿ ಸುಭದ್ರ: ಗ್ಯಾರಂಟಿ ಜನರಿಗೆ ತಲುಪಿವೆ- ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಏಪ್ರಿಲ್,1,2026 (www.justkannada.in):  ರಾಜ್ಯದ ಹಣಕಾಸು ಸ್ಥಿತಿ ಸುಭ್ರದ್ರವಾಗಿದೆ. ನಾವು ಕೊಟ್ಟ ಗ್ಯಾರಂಟಿಗಳು...

ಇಂದು ಸಿಎಂ ಸಿದ್ದರಾಮಯ್ಯ, ಏ.5ಕ್ಕೆ ಜಮೀರ್ ಪ್ರಚಾರಕ್ಕೆ ಬರಲಿದ್ದಾರೆ – ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

ದಾವಣಗೆರೆ,ಏಪ್ರಿಲ್,1,2026 (www.justkannada.in):  ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು ಪ್ರಚಾರಕ್ಕಾಗಿ...

ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ- ಮಾಜಿ ಸಿಎಂ ಬಿಎಸ್ ವೈ

ಬೆಂಗಳೂರು,ಮಾರ್ಚ್,31,2026 (www.justkannada.in):  ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ...

ಖಾಲಿ ಇರುವ 2.84 ಲಕ್ಷಕ್ಕೂ ಹೆಚ್ಚು ಹುದ್ದೆ ಭರ್ತಿ ಮಾಡದೆ ಯುವಜನತೆಗೆ ದ್ರೋಹ: ‘ಕೈ’ ಸರ್ಕಾರದ ವಿರುದ್ದ JDS ಕಿಡಿ

ಬೆಂಗಳೂರು,ಮಾರ್ಚ್,31,2026 (www.justkannada.in):  ರಾಜ್ಯದಲ್ಲಿ 2.84 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ...