ಬೆಂಗಳೂರು,ಜುಲೈ,11,2025 (www.justkannada.in): ಸರ್ಕಾರಿ ಶಾಲೆಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಇದು ಡಿಕೆ ಶಿವಕುಮಾರ್ ಸಲಹೆಯಷ್ಟೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಈಗ ಗಂಡುಮಕ್ಕಳಿಗೂ ಉಚಿತ ಬಸ್ ಬಗ್ಗೆ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಇದು ಡಿಕೆಶಿ ಸಲಹೆಯಷ್ಟೆ ಎಂದರು.
ಈ ಯೋಜನೆಗೆ 10 ಕೋಟಿ ರೂಗಿಂತ ಹೆಚ್ಚು ಖರ್ಚಾಗುತ್ತೆ. ಆರ್ಥಿಕ ಇಲಾಖೆಯಿಂದ ಸಂಪುಟಕ್ಕೆ ಹೋಗಬೇಕು. ಡಿಕೆಶಿ ಸಲಹೆ ಕೊಟ್ಟಿದ್ದಾರೆ ನೋಡೋಣ. ಕ್ಯಾಬಿನೆಟ್ ತೀರ್ಮಾನ ಮಾಡುತ್ತದೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದರು.
Key words: Free buses, government school, children, Transport Minister, Ramalingareddy
The post ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್: ಇದು ಡಿಕೆಶಿ ಸಲಹೆಯಷ್ಟೆ- ಸಾರಿಗೆ ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.