ಬೆಂಗಳೂರು,ಜುಲೈ,12,2025 (www.justkannada.in): ಸಾಫ್ಟ್ ವೇರ್ ವೃತ್ತಿಯೊಂದಿಗೆ ವಿವಿಧ ಸೇವಾಕಾರ್ಯದಲ್ಲಿ ತೊಡಗಿರುವ ಪುನೀತ್ ಜಿ ಕೂಡ್ಲೂರು ಅವರಿಗೆ ‘ಎಕ್ಸೆಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಅಂಡ್ ಸೋಷಿಯಲ್ ಸರ್ವಿಸ್’ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಸದಾಶಿವನಗರದ ಹೈಡೆ ಪಾರ್ಕ್ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಐಕಾನ್ ಎಕ್ಸೆಲೆಂಟ್ ಅವಾರ್ಡ್ -2025 ರಲ್ಲಿ ಪುನೀತ್ ಜಿ ಕೂಡ್ಲೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುನೀತ್ ಜಿ ಕೂಡ್ಲೂರು ತಮ್ಮ ಸಾಫ್ಟ್ ವೇರ್ ವೃತ್ತಿಯೊಂದಿಗೆ ವಿದ್ಯಾಸ್ಪಂದನ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ 500 ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡುತ್ತಿದ್ದಾರೆ. ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಸ್ಥಾಪಿಸಿ ಅದರಲ್ಲಿ ಹಲವು ವಿದ್ಯಾರ್ಥಿಗಳಿಗೆ ಶ್ಲೋಕ, ಸಂಸ್ಕಾರ ತರಗತಿಗಳನ್ನು ನಡೆಸುತ್ತಿದ್ದಾರೆ.
ಇದರ ಜೊತೆಗೆ ಪರಿಸರ, ರಕ್ತದಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮ ಮಾಡುತ್ತಾ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿರುವ ಇವರ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಸಮಾಜ ಸೇವೆ ಪ್ರಶಸ್ತಿ ಕರ್ನಾಟಕ ಎಕ್ಸಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಆಂಡ್ ಸೋಷಿಯಲ್ ಸರ್ವಿಸ್ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಡಾ. ಅಂಜನಪ್ಪ, ಪ್ರಕೃತಿ ಪ್ರಸನ್ನ , ಪೂಜಾ ಎನ್ , ಡಾ. ಪೃಥು ಪಿ ಅದ್ವೈತ್, ಶೃತಿ ರಾಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Key words: Social work, Puneet G Kudlur, Award
The post ಸಾಫ್ಟ್ ವೇರ್ ವೃತ್ತಿಯೊಂದಿಗೆ ಸೇವಾಕಾರ್ಯ: ಪುನೀತ್ ಜಿ ಕೂಡ್ಲೂರುಗೆ ಒಲಿದ ಪ್ರಶಸ್ತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.