3
March, 2026

A News 365Times Venture

3
Tuesday
March, 2026

A News 365Times Venture

ಸಾಮೂಹಿಕ ಸೂರ್ಯ ನಮಸ್ಕಾರ: ಶಾಲಾ ವಿದ್ಯಾರ್ಥಿಗಳು ಸೇರಿ ಹಲವರು ಭಾಗಿ

Date:

ಮೈಸೂರು,ಫೆಬ್ರವರಿ,4,2025 (www.justkannada.in): ಇಂದು ರಥಸಪ್ತಮಿ ಅಂಗವಾಗಿ ಮೈಸೂರಿನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಸೂರ್ಯಯಜ್ಞ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯೋಗ ಒಕ್ಕೂಟ ವತಿಯಿಂದ ಆಯೋಜಿಸಿದ್ದ  ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಸೂರ್ಯಯಜ್ಞ ಕಾರ್ಯಕ್ರಮದಲ್ಲಿ ಯೋಗಬಂಧುಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಯವರು ಮತ್ತು ಯೋಗಾಸಕ್ತ ನಾಗರೀಕರು ಪಾಲ್ಗೊಂಡಿದ್ದರು.

ಯೋಗ ಒಕ್ಕೂಟ 2001 ರಲ್ಲಿ ಪ್ರಾರಂಭವಾಗಿ ಅನೇಕ ಯೋಗ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ರಥಸಪ್ತಮಿ ಅಂಗವಾಗಿ ಸಾಮೂಹಿಕ 108 ಸೂರ್ಯ ನಮಸ್ಕಾರಗಳು ಮತ್ತು ಸೂರ್ಯ ಯಜ್ಞ ಧಾರ್ಮಿಕ ಕಾರ್ಯಕ್ರಮವನ್ನು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸುತ್ತಾ ಬಂದಿದೆ.

ಅಲ್ಲದೆ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳಾದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಯೋಗಚಿತ್ರಕಲಾ ಸ್ಪರ್ಧೆ, ಜನ ಸಾಮಾನ್ಯರಲ್ಲಿ ಆರೋಗ್ಯದ ಅರಿವು ಮೂಡಿಸಲು ಉಚಿತವಾಗಿ ಸರ್ಕಾರಿ ಆಯುರ್ವೇದ ಮತ್ತು ಜೆ.ಎಸ್‌.ಎಸ್‌. ಆಯುರ್ವೇದ ಕಾಲೇಜಿನ ವೈದ್ಯರ ಸಹಕಾರದೊಂದಿಗೆ ಆರೋಗ್ಯ ಸಪ್ತಾಹ ಮತ್ತು ಯೋಗ ಕಾರ್ಯಾಗಾರವನ್ನು ಯೋಗ ಒಕ್ಕೂಟ ಆಗಾಗ ಆಯೋಜಿಸುತ್ತಿದೆ. ಜೊತೆಗೆ ಮೈಸೂರು ಯೋಗ ಸಂಸ್ಥೆಗಳ ಜೊತೆಗೂಡಿ ಪ್ರತಿವರ್ಷ ಜೂನ್ 21 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದೆ.

Key words: mysore, Rathasaptami, Surya Namaskar

The post ಸಾಮೂಹಿಕ ಸೂರ್ಯ ನಮಸ್ಕಾರ: ಶಾಲಾ ವಿದ್ಯಾರ್ಥಿಗಳು ಸೇರಿ ಹಲವರು ಭಾಗಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮನೆಗಳ ಮುಂದೆ ಅಳವಡಿಸಿದ್ದ ನೀರಿನ ಮೀಟರ್ ಕಳ್ಳತನ

ಮೈಸೂರು,ಮಾರ್ಚ್,3,2026 (www.justkannada.in): ಮೈಸೂರು ನಗರದ 50ನೇ ವಾರ್ಡ್‌ನ ಬೆಸ್ತಕೇರಿ ಪ್ರದೇಶದಲ್ಲಿ ನೀರಿನ...

‘Whistle Blower Policy’ ಜಾರಿ:  ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ಬೆಂಗಳೂರು, ಮಾರ್ಚ್,3,2026 (www.justkannada.in): ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ...

ಖಮನೈ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮೌನ: ಸೋನಿಯಾ ಗಾಂಧಿ ಕಿಡಿ

ನವದೆಹಲಿ, ಮಾರ್ಚ್, 3,2026 (www.justkannada.in): ಇರಾನ್ ಮೇಲೆ ಇಸ್ರೇಲ್, ಅಮೇರಿಕಾ ಜಂಟಿ...

ಮಧ್ಯ ಪ್ರಾಚ್ಯ ಕೊಲ್ಲಿ ದೇಶಗಳಲ್ಲಿ ಘರ್ಷಣೆ: ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭ

ಬೆಂಗಳೂರು ಗ್ರಾಮಾಂತರ, ಮಾರ್ಚ್,3,2026 (www.justkannada.in):  ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಯುದ್ಧ,ಸಂಘರ್ಷ...