17
February, 2026

A News 365Times Venture

17
Tuesday
February, 2026

A News 365Times Venture

ಸಿಎಂ ಆಪ್ತನ ಗಡಿಪಾರಿಗೆ ಆಗ್ರಹ: ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ

Date:

ಮೈಸೂರು,ಆಗಸ್ಟ್,7,2025 (www.justkannada.in): ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಜಿ.ವಿ.ಸೀತಾರಾಮ್ ಗಡಿಪಾರಿಗೆ ಆಗ್ರಹಿಸಿ ಇಂದು ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ.

ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ಒಕ್ಕಲಿಗ ಮುಖಂಡರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಚ್ಚಿ ಬಂದ್ ಗೆ ಸಾಥ್ ನೀಡಿದ್ದಾರೆ. ಮೂವತ್ತು ಸಾವಿರಕ್ಕೂ‌ ಹೆಚ್ಚು ಒಕ್ಕಲಿಗರು  ಜಮಾವಣೆಗೊಂಡಿದ್ದು ಹೆಚ್.ಡಿ.ಕೋಟೆ ತಹಶೀಲ್ದಾರ್ ಕಚೇರಿ ಬಳಿ ಜಿ.ವಿ.ಸೀತಾರಾಮ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದ್ ಗೆ  ರಾಜ್ಯ ಒಕ್ಕಲಿಗರ ಸಂಘ, ಮೈಸೂರು, ಚಾಮರಾಜನಗರ ಒಕ್ಕಲಿಗರ ಸಂಘ ಸಾಥ್ ನೀಡಿದ್ದು ಮಾಜಿ ಸಂಸದ ಪ್ರತಾಪಸಿಂಹ ಸೇರಿ ಒಕ್ಕಲಿಗ ಮುಖಂಡರು ಪ್ರತಿಭಟನೆ ವೇಳೆ ಉಪಸ್ಥಿತರಿದ್ದರು.

ಕಬಿನಿ ಹಿನ್ನೀರಿನಲ್ಲಿ ಜಿ.ವಿ.ಸೀತಾರಾಮ್ ವಿರುದ್ದ ಭೂ ಕಬಳಿಸಿರುವ ಆರೋಪ ಕೇಳಿ ಬಂದಿತ್ತು. ಅಕ್ರಮ ಭೂ‌ ಒತ್ತುವರಿ ಕುರಿತು ಹೋರಾಟಗಾರ ಪರಮೇಶ್ ಎಂಬುವವರು ಪ್ರಶ್ನಿಸಿದ್ದರು.  ಪರಮೇಶ್ ಪ್ರಶ್ನಿಸುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ  ಒಕ್ಕಲಿಗರ ವಿರುದ್ಧ ಕೆಟ್ಟ ಪದಗಳ ಬಳಕೆ ಮಾಡಿ ಅವಮಾನ ಮಾಡಿದ್ದಾರೆ ಎಂಬ ಆರೋಪವಿದೆ.

Key words: HD Kote, saragur, Bandh, protest, Vokkaliga

The post ಸಿಎಂ ಆಪ್ತನ ಗಡಿಪಾರಿಗೆ ಆಗ್ರಹ: ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಬರಿಮಲೆ ವಿವಾದ: ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ

ನವದೆಹಲಿ,ಫೆಬ್ರವರಿ,16,2026 (www.justkannada.in): ಕೇರಳದ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ...

“ನಂದಿನಿ” ಬಗ್ಗೆ ಅಪಪ್ರಚಾರ: ಸೈಬರ್ ಪೊಲೀಸರಿಗೆ ಕೆಎಂಎಫ್ ದೂರು, ಕಾನೂನು ಕ್ರಮಕ್ಕೆ ಮುಂದಾದ ಸಂಸ್ಥೆ.

  ಬೆಂಗಳೂರು, ಫೆ.೧೬,೨೦೨೬: ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ...

ದೇಶದ ಪ್ರದರ್ಶನ ಕಲೆಗಳ ವೈವಿಧ್ಯತೆ ತೆರೆದಿಡುವುದು ಅಂಚೆ ಸಾಂಸ್ಕೃತಿಕ ಸಮ್ಮೇಳನದ ಉದ್ದೇಶ- ಜಿತೇಂದ್ರ ಗುಪ್ತಾ

ಮೈಸೂರು,ಫೆಬ್ರವರಿ,16,2026 (www.justkannada.in): ಭಾರತದ ಪ್ರದರ್ಶನ ಕಲೆಗಳ ವೈವಿಧ್ಯತೆಯನ್ನು ತೆರೆದಿಡುವುದು ಅಖಿಲ ಭಾರತೀಯ...

ಡಿಕೆಶಿ ಬಂಡೆ ಅಲ್ಲ, ರೈಲ್ವೆ ಇಂಜಿನ್: ಎಲ್ಲರನ್ನೂ ಎಳೆದುಕೊಂಡು ಹೋಗ್ತಿದ್ದಾರೆ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಫೆಬ್ರವರಿ,16,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಬಂಡೆ ಅಲ್ಲ, ರೈಲ್ವೆ ಇಂಜಿನ್...