7
April, 2026

A News 365Times Venture

7
Tuesday
April, 2026

A News 365Times Venture

ಸಿಎಂ ತವರಲ್ಲಿ ಅಧಿಕಾರಿಗಳ ದರ್ಬಾರ್: ಜನಪ್ರತಿನಿಧಿಗಳ ಮಾತಿಗೂ ಸ್ಪಂದನೆ ಇಲ್ಲ- ಸಂಸದ ಯದುವೀರ್ ಕಿಡಿ

Date:

ಮೈಸೂರು,ಏಪ್ರಿಲ್,7,2026 (www.justkannada.in):  ಚಾಮುಂಡಿ ಬೆಟ್ಟದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಭಾವನೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು  ಚಾಮುಂಡಿ ಬೆಟ್ಟ ಪ್ರಾಧಿಕಾರದ ವಿರುದ್ಧ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದರು.

ಇಂದು ಮಾತನಾಡಿದ ಸಂಸದ ಯದುವೀರ್, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ವಿಚಾರ ನ್ಯಾಯಾಲಯದಲ್ಲಿದೆ. ಚಾಮುಂಡಿ ಬೆಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಯಾರ ಮಾತಿಗೂ ಬೆಲೆ‌ ಕೊಡುತ್ತಿಲ್ಲ. ಈ ಬಗ್ಗೆ ವ್ಯಾಪಕ ದೂರುಗಳು‌ ಕೇಳಿ ಬಂದಿವೆ. ಸ್ಥಳೀಯ ಆಡಳಿತ ಹಾಗೂ ಅಲ್ಲಿನ ನಿವಾಸಿಗಳ ಮಾತಿಗೂ ಪ್ರಾಧಿಕಾರದ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಸ್ಥಳೀಯ ನಿವಾಸಿಗಳ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು.

ಮೈಸೂರಿನ ವಿವಿಧೆಡೆಗಳಲ್ಲಿ ಅವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ‌ ಯದುವೀರ್, ಮೈಸೂರಿ ಹಲವೆಡೆ ಎಲ್ಲೆಂದರಲ್ಲಿ ಸಿಗ್ನಲ್ ಲೈಟ್ ಅಳವಡಿಸಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಈ ರೀತಿ ಅವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಅಳವಡಿಸಲು ಯಾರು ಅನುನತಿ ನೀಡಿದರೋ ಗೊತ್ತಿಲ್ಲ. ಕೆಲವೇ ಮೀಟರ್ ಅಂತರದಲ್ಲಿ ಸಿಗ್ನಲ್ ಲೈಟ್ ಅಳವಡಿಸಿರುವ ಕಾರಣ ವಾಹ‌ನ ಸವಾರರಿಗೆ ತೊಂದರೆ ಆಗುತ್ತಿದೆ. ರಸ್ತೆಯಲ್ಲಿ ಸಂಚರಿಸಲು ಅನಗತ್ಯವಾಗಿ ವಿಳಂಬ ಆಗುತ್ತಿದೆ. ಸಿಗ್ನಲ್‌ ಲೈಟ್ ಅಳವಡಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ಸಿಎಂ ತವರಲ್ಲಿ ಅಧಿಕಾರಿಗಳ ದರ್ಬಾರ್

ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ. ಸರ್ಕಾರಿ ಅಧಿಕಾರಿಗಳ ಕಾರ್ಯ ವೈಖರಿ ಸರಿಯಿಲ್ಲ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾಗಿದೆ. ಆದರೆ ಇಲ್ಲಿ ಅಧಿಕಾರಿಗಳ ದರ್ಬಾರು ನಡೆಯುತ್ತಿದೆ. ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಕಿವಿಕೊಡುತ್ತಿಲ್ಲ. ಜನಪ್ರತಿನಿಧಿಗಳ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಂಸದ ಯದುವೀರ್ ಅಸಮಾಧಾನ ವ್ಯಕ್ತಪಡಿಸಿದರು.

Key words: Officers, No response, public, representatives, Mysore MP, Yaduveer

The post ಸಿಎಂ ತವರಲ್ಲಿ ಅಧಿಕಾರಿಗಳ ದರ್ಬಾರ್: ಜನಪ್ರತಿನಿಧಿಗಳ ಮಾತಿಗೂ ಸ್ಪಂದನೆ ಇಲ್ಲ- ಸಂಸದ ಯದುವೀರ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇರಾನ್ ಗೆ ಕೊನೆಯ ಎಚ್ಚರಿಕೆ ನೀಡಿದ ಡೊನಾಲ್ಡ್  ಟ್ರಂಪ್

ವಾಷಿಂಗ್ಟನ್,ಏಪ್ರಿಲ್,7,2026 (www.justkannada.in):  ಇರಾನ್ ಮತ್ತು ಅಮೆರಿಕ ನಡುವಿನ ಯುದ್ದ ಮತ್ತಷ್ಟು ಉದ್ವಿಗ್ನಗೊಂಡಿದ್ದು...

ಸ್ವಾಮೀಜಿಗಳು ಚಾರಿತ್ರ್ಯವಂತರಾಗಿದ್ರೆ ಯಾಕೆ ಸ್ಟೇ ತರುತ್ತಿದ್ರು? ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

ಬಾಗಲಕೋಟೆ,ಏಪ್ರಿಲ್,7,2026 (www.justkannada.in): ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ...

ನೇಮಕಾತಿ ಆರಂಭಕ್ಕೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಸಿದ್ದತೆ: ಅನುಮತಿ ನಿರಾಕರಿಸಿದ ಪೊಲೀಸರು

ಧಾರವಾಡ, ಏಪ್ರಿಲ್,7,2026 (www.justkannada.in): ರಾಜ್ಯದಲ್ಲಿ ಒಳಮೀಸಲಾತಿ ಗೊಂದಲದಿಂದಾಗಿ ಸ್ಥಗಿತಗೊಂಡಿರುವ ನೇಮಕಾತಿಗಳನ್ನ ಆರಂಭಿಸಲು...

ಗ್ಯಾಸ್ ಪೂರೈಕೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ- ಸಚಿವ ಕೆ.ಎಚ್ ಮುನಿಯಪ್ಪ

ಬಾಗಲಕೋಟೆ,ಏಪ್ರಿಲ್,7,2026 (www.justkannada.in):  ಎಲ್ ಪಿಜಿ ಗ್ಯಾಸ್ ಪೂರೈಕೆ ಮಾಡುವಲ್ಲಿ  ಕೇಂದ್ರ ಸರ್ಕಾರ...