ಉತ್ತರ ಕನ್ನಡ,ಫೆಬ್ರವರಿ,23,2026 (www.justkannada.in): ಸಿದ್ದರಾಮಯ್ಯರನ್ನು 5 ವರ್ಷಕ್ಕೆ ಮುಖ್ಯಮಂತ್ರಿ ಅಂತಾ ಆಯ್ಕೆ ಮಾಡಿದ್ದಾರೆ. ಹೀಗಾಗಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ದಲಿತ ಸಿಎಂ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆ ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಚರ್ಚೆಯಾದ ತಕ್ಷಣ ಸಿಎಂ ಮಾಡಲು ಆಗುವುದಿಲ್ಲ. ಸಿಎಂ ಆಕಾಂಕ್ಷಿಗಳು ಹಲವು ಜನರಿದ್ದಾರೆ. ದಲಿತ ಸಿಎಂ ಬಗ್ಗೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗ ಸಿಎಂ ಇದ್ದಾರೆ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಐದು ವರ್ಷಕ್ಕೆ ಅಂತಾ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ ಎಂದರು.
ಸಿಎಂ ಸ್ಥಾನದ ವಿಚಾರವಾಗಿ ಪಕ್ಷದಲ್ಲಿ ಸಾಕಷ್ಟು ಗೊಂದಲವಿದೆ. ಶಾಸಕರು ವಿದೇಶ ಪ್ರವಾಸ ಹೋಗುವುದು ಸಾಮಾನ್ಯ. ನಾಯತ್ವ ಗೊಂದಲಕ್ಕೂ ವಿದೇಶಿ ಪ್ರವಾಸಕ್ಕೂ ಸಂಬಂಧವಿಲ್ಲ. ನಾವ್ಯಾರು ಈಗ ಸಿಎಂ ರೇಸ್ ನಲ್ಲಿಲ್ಲ. ಆರಾಮವಾಗಿ ಓಡಾಡುತ್ತಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
Key words: Siddaramaiah, CM, 5 years, Minister, Satish Jarkiholi
The post ಸಿದ್ದರಾಮಯ್ಯರನ್ನು 5 ವರ್ಷಕ್ಕೆ ಅಂತ ಸಿಎಂ ಮಾಡಿದ್ದಾರೆ: ಬದಲಾವಣೆ ಪ್ರಶ್ನೆ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




