18
March, 2026

A News 365Times Venture

18
Wednesday
March, 2026

A News 365Times Venture

ಸಿದ್ದರಾಮಯ್ಯ ಅಧಿಕಾರ ತೊರೆಯುವ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಗ್ರಿಮೆಂಟ್  ಆಗಿದೆ- ಆರ್.ಅಶೋಕ್ ವ್ಯಂಗ್ಯ

Date:

ಮೈಸೂರು,ಜೂನ್,12,2025 (www.justkannada.in): ಸಿದ್ದರಾಮಯ್ಯ ಆರು ತಿಂಗಳಲ್ಲಿ ಅಧಿಕಾರ ತೊರೆಯುವ ಬಗ್ಗೆ ನೋಟರಿ ಆಫೀಸ್ ನಲ್ಲಿ ಅಗ್ರಿಮೆಂಟ್ ಆಗಿಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಗ್ರಿಮೆಂಟ್ ಆಗಿದೆ ಎಂದು  ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್,  ಡಿ. ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಸಿಎಂ ಕುರ್ಚಿ ಭದ್ರವಾಗಿದ್ದರೇ ಈ ರೀತಿ ಯಾಕೆ ಹೇಳುತ್ತಿದ್ದರು. ಸಿಎಂ ಕುರ್ಚಿಯನ್ನು ಒದ್ದು ಕಿತ್ತುಕೊಳ್ಳುವುದಾಗಿ ವಿಧಾನಸಭೆ ಅಧಿವೇಶನದಲ್ಲೇ ಹೇಳಿದ್ದಾರೆ. ಕಾಂಗ್ರೆಸ್ ನೆಗೆದು ಬಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ರಾಜ್ಯದಲ್ಲಿ ರಸ್ತೆಗಳು ಹಾಳಾಗಿವೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ನಾವೇನು ರಾಜಕೀಯ ಸನ್ಯಾಸಿಗಳಲ್ಲ. ಆದರೆ ನಾವಾಗಿಯೇ ರಾಜ್ಯ ಸರ್ಕಾರವನ್ನು ಬೀಳಿಸುವುದಿಲ್ಲ. ಅವರೇ ಕಚ್ಚಾಡಿಕೊಂಡು ಬೀಳುತ್ತಾರೆ. ಸಿಎಂ ಕುರ್ಚಿಯನ್ನು ನಾಲ್ವರು ಎಳೆದಾಡುತ್ತಿದ್ದಾರೆ. ಅದರಿಂದಲೇ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.

ದೇಶ ಈಗ ಒಂದು ಮಹತ್ವದ ಘಟ್ಟಕ್ಕೆ ಹೋಗುತ್ತಿರುವ ಕಾಲವಾಗಿದೆ

ದೇಶ ಈಗ ಒಂದು ಮಹತ್ವದ ಘಟ್ಟಕ್ಕೆ ಹೋಗುತ್ತಿರುವ ಕಾಲವಾಗಿದೆ. ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿದ ಜನರು ಮೂರನೇ ಬಾರಿ ಅಧಿಕಾರ ನೀಡಿದ್ದಾರೆ. ಮನಮೋಹನ್ ಸಿಂಗ್ ಅವರ 10 ವರ್ಷದ ಆಡಳಿತಕ್ಕೆ ಹೋಲಿಸಿದರೆ ನರೇಂದ್ರ ಮೋದಿಯವರ 11 ವರ್ಷದ ಆಡಳಿತದಲ್ಲಿ ದೇಶ ಮೂರ್ನಾಲ್ಕು ಪಟ್ಟು ಅಭಿವೃದ್ಧಿ ಆಗಿದೆ. ಜಪಾನನ್ನು ಹಿಂದಿಕ್ಕಿ ಭಾರತದ ಆರ್ಥಿಕತೆ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೆ ಬಂದಿದೆ‌. ಇದಕ್ಕೆ ನರೇಂದ್ರ ಮೋದಿಯವರ ಗಟ್ಟಿ ನಿಲುವು ಕಾರಣವಾಗಿದೆ. ಒಂದು ಕಾಲದಲ್ಲಿ ಗೋಧಿಗೋಸ್ಕರ ವಿದೇಶಗಳ ಬಳಿ ಕೈಚಾಚುವ ಪರಿಸ್ಥಿತಿ ಇತ್ತು. ಕೋವಿಡ್ ಸಂದರ್ಭದಲ್ಲಿ ಹಲವಾರು ವಿಶ್ವದ ರಾಷ್ಟ್ರಗಳಿಗಳಿಗೆ ಭಾರತ ವ್ಯಾಕ್ಸಿನ್ ನೀಡಿತು. ಇದರಿಂದ ‌ನರೇಂದ್ರ ಮೋದಿ ಮಾತ್ರವಲ್ಲದೇ ಜ‌‌ನಸಾಮಾನ್ಯರಿಗೂ ಗೌರವ ಸಿಗುತ್ತಿದೆ. ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದೇಶದ ಜನರ ತಲಾದಾಯ ಹೆಚ್ಚಾಗಿದೆ. ಅಡುಗೆ ಅನಿಲ ಸಿಲಿಂಡರ್ ಗೆ ಈಗಲೂ 500 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ಆರ್ ಅಶೋಕ್ ತಿಳಿಸಿದರು.

ಇತ್ತೀಚಿನ ಬಿಡುಗಡೆ ಆಗಿರುವ ವರದಿಯ ಪ್ರಕಾರ ದೇಶದ 27 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ನಕ್ಸಲ್ ಚಟುವಟಿಕೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಸಮಾಜದ ವಿವಿಧ ವಲಯಗಳಲ್ಲಿ ಗಮನಾರ್ಹ ಪ್ರಗತಿ ಆಗಿದೆ. ನರೇಂದ್ರ ಮೋದಿಯವರು ಇವತ್ತು ವಿಶ್ವ ನಾಯಕರಾಗಿದ್ದಾರೆ. ವಿಶ್ವದಲ್ಲಿ ಯಾವುದೇ ವಿದ್ಯಮಾನಗಳು ಎದುರಾದಾಗ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಕಾಶ್ಮೀರ ನಮ್ಮದು ಎಂಬ ಭಾವನೆ ನೆಲೆಯೂರಿದೆ. ಅಲ್ಲಿನ ಜನರು ಪಾಕಿಸ್ತಾನವನ್ನು ವಿರೋಧಿಸುತ್ತಿದ್ದಾರೆ. ಉಗ್ರರು ನಡೆಸಿದ ದಾಳಿ ಬಳಿಕ ಪಾಕಿಸ್ತಾನ ವಿರೋಧಿ ರ್ಯಾಲಿಗಳನ್ನು ನಡೆಸಲಾಯಿತು. ಪಾಕಿಸ್ತಾನ ಭಿಕ್ಷಾಪಾತ್ರೆ ಆಗಿದೆ, ಅದರ ಜೊತೆ ಹೋಗಬಾರದು ಎಂದು ಕಾಶ್ಮೀರದ ಜನತೆ ತೀರ್ಮಾನಿಸಿದ್ದಾರೆ. ಇದಕ್ಕೆಲ್ಲಾ ನರೇಂದ್ರ ಮೋದಿಯವರ ಜನಮೆಚ್ಚಿದ ಆಡಳಿತ ಕಾರಣವಾಗಿದೆ ಎಂದು ಆರ್ ಅಶೋಕ್ ಹೇಳಿದರು.vtu

Key words: agreement, Sub-Registrar, Siddaramaiah, leaving power , R. Ashok

The post ಸಿದ್ದರಾಮಯ್ಯ ಅಧಿಕಾರ ತೊರೆಯುವ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಗ್ರಿಮೆಂಟ್  ಆಗಿದೆ- ಆರ್.ಅಶೋಕ್ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾ.22 ರಂದು ‘ಡಿವಿಜಿ ಪ್ರಶಸ್ತಿ’ ಮತ್ತು ‘ಬಿಜಿಎಲ್ ಸ್ವಾಮಿ ಪ್ರಶಸ್ತಿ’ ಪ್ರದಾನ ಸಮಾರಂಭ

ಮೈಸೂರು,ಮಾರ್ಚ್,18,2026 (www.justkannada.in): ಡಿವಿಜಿ ಬಳಗ ಪ್ರತಿಷ್ಠಾನದ ವತಿಯಿಂದ ಹಿರಿಯ ವಿಜ್ಞಾನಿ ಲೇಖಕ...

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಆಗದಂತೆ ಕ್ರಮ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮಾರ್ಚ್,17,2026 (www.justkannada.in): ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಆಗದಂತೆ ಕ್ರಮ ವಹಿಸಲಾಗುತ್ತದೆ...

 ‘ಸೌದೆ ಬೇಡ, ಗ್ಯಾಸ್ ಬೇಕು’ ಚಳವಳಿ: ಹೆದ್ದಾರಿ ತಡೆದು ಪ್ರತಿಭಟನೆಗೆ ವಾಟಾಳ್ ನಾಗರಾಜ್ ಕರೆ

ಬೆಂಗಳೂರು,ಮಾರ್ಚ್,17,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು...

ಕೆ.ಆರ್.ಎಸ್ ರಸ್ತೆ ಗೋಕುಲ್ ಚಿತ್ರಮಂದಿರದಲ್ಲಿ ಅಗ್ನಿ ದುರಂತ: ವಾಚ್‌ಮನ್ ಸಜೀವ ದಹನ

  ಮೈಸೂರು, ಮಾ.೧೭,೨೦೨೬ : ಕೆ.ಆರ್.ಎಸ್ ರಸ್ತೆಯಲ್ಲಿನ ಸ್ಥಗಿತಗೊಂಡ ಗೋಕುಲ್ ಚಿತ್ರಮಂದಿರದ ಆವರಣದಲ್ಲಿ...