ಮೈಸೂರು, ಆಗಸ್ಟ್,14,2025 (www.justkannada.in): ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿದ ಖದೀಮರು ಮನೆ ಮಾಲೀಕರ ಮುಂದೆಯೇ ಎಸ್ಕೇಪ್ ಆದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆ ಬೀಗ ಮುರಿದು ಸುಮಾರು 80 ಗ್ರಾಂ ಚಿನ್ನ, 1.40 ಲಕ್ಷ ನಗದು ದೋಚಿದ ದರೋಡೆಕೋರರು ಮನೆ ಮಾಲೀಕರು ಬಂದರೂ ವಿಚಲಿತರಾಗದೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿ ಪುನೀತ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಕೆಲಸ ನಿಮಿತ್ತ ಮನಗೆ ಬೀಗ ಹಾಕಿ ದಂಪತಿ ಹೊರ ಹೋಗಿದ್ದರು. ಹೊಂಚು ಹಾಕುತ್ತಿದ್ದ ಖದೀಮರು ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ದಂಪತಿ ಮನೆಗೆ ಹಿಂದಿರುಗಿದ್ದು ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಖದೀಮರು ಕಾಂಪೌಂಡ್ ಜಿಗಿದು ಅವರ ಮುಂದೆಯೇ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ನಂಜನಗೂಡು ಪಟ್ಟಣ ಠಾಣಾ ಪೋಲಿಸರು ಭೇಟಿ ನೀಡಿದ್ದು ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Robbery, house, escape, in front of, owner, Mysore
The post ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ: ಮಾಲೀಕರ ಮುಂದೆಯೇ ಎಸ್ಕೇಪ್ ಆದ ಖದೀಮರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




