ಮೈಸೂರು,ಜುಲೈ,14,2025 (www.justkannada.in): ನಿನ್ನೆ ನಿಧನರಾದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರ್ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ ಹಿರಿಯ ಪತ್ರಕರ್ತ ದಿ. ಕೆ.ಬಿ. ಗಣಪತಿ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಕೆ.ಬಿ.ಗಣಪತಿ ಅವರಿಂದ ನಾವೆಲ್ಲರೂ ಪ್ರೇರಣೆ ಹಾಗೂ ಸ್ಫೂರ್ತಿ ಪಡೆದಿದ್ದೇವೆ. ಗಣಪತಿ ಯಾವುದೇ ವ್ಯಕ್ತಿಗೆ ನೇರ ಪ್ರಶ್ನೆ ಮಾಡುತ್ತಿದ್ದಂತ ವ್ಯಕ್ತಿ. 1978ರಲ್ಲಿ ಸ್ಟಾರ್ ಆಫ್ ಮೈಸೂರ್ ಎಂಬ ಪತ್ರಿಕೆ ಪ್ರಾರಂಭಿಸಿದರು. 45 ವರ್ಷಗಳಿಂದ ಪತ್ರಿಕೋಧ್ಯಮ ನಿರಂತರವಾಗಿ ಕೊಂಡೋಯ್ವ ಸಮರ್ಥತೆ ಗಣಪತಿ ಅವರಿಗಿತ್ತು. ಕೊಡಗು ಅವರ ಜನ್ಮಭೂಮಿ ಮೈಸೂರು ಅವರ ಕರ್ಮಭೂಮಿಯಾಗಿತ್ತು . ಮೈಸೂರಿನಲ್ಲೇ ಮಣ್ಣಾಗಬೇಕು ಎಂಬ ಅವರ ಗುರಿಯನ್ನ ಸಾಧಿಸಿದ್ದಾರೆ. ಗಣಪತಿ ಹಾಗೂ ರಾಜಶೇಖರ್ ಕೋಟಿ ಅವರಿಗೆ ನಮ್ಮಂತ ರಾಜಕಾರಣಿಗಳು ಕೃತಜ್ಞರು ಎಂದು ನುಡಿದರು.
ದೇವರಾಜ ಮಾರುಕಟ್ಟೆಯಲ್ಲಿ ರೈತರ ಸಮಸ್ಯೆ ತಿಳಿಸಿ, ಅಂದಿನ ಮಂತ್ರಿಗಳ ಕೈಲೂ ಸೈ ಎನಿಸಿಕೊಂಡವರು ಗಣಪತಿ. ಶಂಕರಲಿಂಗೇಗೌಡರನ್ನ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದೇ ಮೈಸೂರು ಮಿತ್ರ ಪತ್ರಿಕೆ ಗಣಪತಿಯವರು. ಒಳ್ಳೆ ಕೆಲಸ ಮಾಡಿದ್ರೆ ಪ್ರಶಂಸೆ ಮಾಡಿದ್ದಾರೆ. ಆ ಹೊಗಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಲ್ಲ. ಗಣಪತಿಯವರ ಮಾತಿಗೆ ಎಲ್ಲರೂ ಗೌರವಿಸುತ್ತಿದ್ದರು.ಅವರ ಮಾತು ಅರ್ಥಪೂರ್ಣವಾಗಿರುತ್ತಿತ್ತು. ಮೈಸೂರಿನ ಮೆಟ್ರೋ ರೈಲು ಏರ್ಪೋರ್ಟ್ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸದ ಬಗ್ಗೆ ಆಶಯ ಇಟ್ಟಿದ್ದವರು ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕೆ.ಬಿ.ಗಣಪತಿ ಅವರಿಗೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಸಂತಾಪ
ನಿನ್ನೆ ನಿಧನರಾದ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಅವರಿಗೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಹೇಳಿಕೆ ಮೂಲಕ ಸಂತಾಪ ಸೂಚಿಸಿದ್ದಾರೆ. ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರ್ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ ಹಿರಿಯ ಪತ್ರಕರ್ತ ದಿ. ಕೆ.ಬಿ. ಗಣಪತಿ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದು, ನೇರನುಡಿ, ಪ್ರಾಮಾಣಿಕತೆರಾಗಿದ್ದರು. ಎಲ್ಲರಿಗೂ ಗೌರವ ನೀಡುವ ಮನೋಭಾವ ಹೊಂದಿದ್ದರು ಎಂದು ಸ್ಮರಿಸಿದರು.
Key words: Tributes, senior journalist, K.B. Ganapathi, Mysore
The post ಹಿರಿಯ ಪತ್ರಕರ್ತ ದಿ. ಕೆ.ಬಿ.ಗಣಪತಿ ಅವರಿಗೆ ಶ್ರದ್ಧಾಂಜಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.