17
February, 2026

A News 365Times Venture

17
Tuesday
February, 2026

A News 365Times Venture

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ- ಸಚಿವ ಎಂ.ಬಿ ಪಾಟೀಲ್

Date:

ಕೋಲಾರ,ಫೆಬ್ರವರಿ,17,2026 (www.justkannada.in): ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್  ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್ 125 ದರ್ಜೆಯ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಈ ಘಟಕವು ರಾಜ್ಯದಲ್ಲಿ ಕಾರ್ಯಾರಂಭ ಮಾಡುತ್ತಿರುವುದು ಐತಿಹಾಸಿಕ ಸಾಧನೆಯಾಗಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಇಲ್ಲಿ ನಡೆದ ನೂತನ ಘಟಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುಯಲ್ ಮೂಲಕ ಈ ಘಟಕವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವೇಮಗಲ್ ಘಟಕದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್, ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು, ಕೋಲಾರ ಸಂಸದ ಮಲ್ಲೇಶಬಾಬು ಕೂಡ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ  ಎಂ.ಬಿ ಪಾಟೀಲ್ ಅವರು, ‘ಈ ಘಟಕಕ್ಕೆ ನಾನು ಕೈಗಾರಿಕಾ ಸಚಿವನಾದ ಮೇಲೆ 17 ಎಕರೆ ಜಾಗ ಕೊಟ್ಟಿದ್ದು  ದಾಖಲೆ ಅವಧಿ ಅಂದರೆ ಒಂದೂವರೆ ವರ್ಷದಲ್ಲಿ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಯೋಜನೆಗೆ ತ್ವರಿತ ಗತಿಯಲ್ಲಿ ಅನುಮೋದನೆ, ಇಲಾಖೆಗಳ ನಡುವೆ ಅತ್ಯುತ್ತಮ ಸಮನ್ವಯ, ಮೂಲಸೌಕರ್ಯ ಸನ್ನದ್ಧತೆ ಮತ್ತು ಕೈಗಾರಿಕಾ ಪಾಲುದಾರರೊಂದಿಗೆ ಸಕ್ರಿಯ ಪಾಲ್ಗೊಳ್ಳುವಿಕೆಗಳಿಂದ ಈ ಚಾರಿತ್ರಿಕ ಯೋಜನೆ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಂಡಿದೆ’ ಎಂದು ಸಚಿವ ಎಂ.ಬಿ ಪಾಟೀಳ್ ಹೇಳಿದರು.

ಫ್ರಾನ್ಸ್, ಅಮೆರಿಕ, ಬ್ರೆಜಿಲ್ ನಂತರ ನಮ್ಮಲ್ಲಿ ಜಗತ್ತಿನ ನಾಲ್ಕನೆಯ ಎಚ್ 125 ಹೆಲಿಕಾಪ್ಟರ್ ತಯಾರಿಕೆ ಮತ್ತು ಅಂತಿಮ ಜೋಡಣೆ ಘಟಕ (ಎಫ್ಎಎಲ್- ಫೈನಲ್ ಅಸೆಂಬ್ಲಿ ಲೈನ್) ಬಂದಿರುವುದು ಈ ವಲಯಕ್ಕೆ ಮತ್ತಷ್ಟು ಬಲ ತರಲಿದೆ. ಜೊತೆಗೆ ನಿರ್ವಹಣೆ, ದುರಸ್ತಿ ಮತ್ತು ಓವರಹಾಲ್ (ಎಂಆರ್ಒ- ಮೇಂಟೆನೆನ್ಸ್, ರಿಪೇರ್ & ಓವರ್ಹಾಲ್) ಸ್ಥಾವರವೂ ಆರಂಭಗೊಂಡಿರುವುದು ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಇಲ್ಲಿ ಮೊದಲಿಗೆ ವರ್ಷಕ್ಕೆ 10 ಹೆಲಿಕಾಪ್ಟರುಗಳನ್ನು ತಯಾರಿಸಲಾಗುವುದು. ಮುಂದಿನ ಎರಡು ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಇಲ್ಲಿ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್, ಬಿಡಿಭಾಗಗಳು, ಇಂಧನ ವ್ಯವಸ್ಥೆ ಮತ್ತು ಎಂಜಿನ್ನುಗಳ ತಯಾರಿಕೆ ಸೇರಿದಂತೆ ಹಲವು ಮಹತ್ವದ ಚಟುವಟಿಕೆಗಳು ನಡೆಯಲಿವೆ. ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ತೀವ್ರ ಸ್ಪರ್ಧೆಯನ್ನು ಎದುರಿಸಿ, ರಾಜ್ಯವು ಈ ಯೋಜನೆಯನ್ನು ಗೆದ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಬಣ್ಣಿಸಿದ್ದಾರೆ.

ಏರ್ ಬಸ್ ಕಂಪನಿಯು ಜಾಗತಿಕ ಮಟ್ಟದಲ್ಲಿ ಏಕ ಎಂಜಿನ್ ಹೆಲಿಕಾಪ್ಟರುಗಳ ಕ್ಷೇತ್ರದಲ್ಲಿ 4,300 ಹೆಲಿಕಾಪ್ಟರುಗಳೊಂದಿಗೆ, ಮಾರುಕಟ್ಟೆಯಲ್ಲಿ ಶೇಕಡ 80ರಷ್ಟು ಪಾಲು ಹೊಂದಿದೆ. ಈ ಹೆಲಿಕಾಪ್ಟರುಗಳು ಇದುವರೆಗೂ 38 ಮಿಲಿಯನ್ ಗಂಟೆಗಳಷ್ಟು ಕಾಲ ಹಾರಾಟ ನಡೆಸಿ ದಾಖಲೆ ನಿರ್ಮಿಸಿವೆ. ರಾಜ್ಯದಲ್ಲಿ ಎಚ್ 125 ದರ್ಜೆಯ ಹೆಲಿಕಾಪ್ಟರ್ ತಯಾರಿಕೆಗೆ ಬೇಕಾದ ವಿಶ್ವಾಸಾರ್ಹತೆ ಮತ್ತು ಎಂಜಿನಿಯರಿಂಗ್ ಪರಿಣತಿ ಇದೆ. ಈ ವಲಯದಲ್ಲಿ ರಾಜ್ಯ ಸರಕಾರವು ಕೇಂದ್ರ ಸರಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಈ ಘಟಕವು ಭಾರತದ ದಕ್ಷತೆಯು ಪಡೆದುಕೊಳ್ಳುತ್ತಿರುವ ಹೊಸ ಶಕ್ತಿ ಮತ್ತು ಜಾಗತಿಕ ಮಟ್ಟದಲ್ಲಿ ಏರ್ಪಡಿಸಿಕೊಳ್ಳುವ ಸಹಭಾಗಿತ್ವದ ಸಂಕೇತವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಮೃದ್ಧ ಅವಕಾಶಗಳು ತೆರೆದುಕೊಳ್ಳಲಿದ್ದು, ಉದ್ಯೋಗಸೃಷ್ಟಿಯೂ ಹೆಚ್ಚಾಗಲಿದೆ. ಇದರಿಂದ ರಾಜ್ಯದ ಯುವಜನರಿಗೆ ಆಧುನಿಕ ತಂತ್ರಜ್ಞಾನ ವಲಯಕ್ಕೆ ಪ್ರವೇಶ ಸಿಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

Key words: Manufacturing, 500 helicopters, 20 years, Minister, M.B. Patil

The post 20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ: ಸರ್ಕಾರದ ವಿರುದ್ದ ಸಭಾಪತಿ ಹೊರಟ್ಟಿ ಅಸಮಾಧಾನ

ಹಾವೇರಿ,ಫೆಬ್ರವರಿ,17,2026 (www.justkannada.in):  ರಾಜ್ಯದಲ್ಲಿ ಅತಿಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಅಧಿಕಾರಕ್ಕೆ...

ಕಟ್ಟಾ ಕಾಂಗ್ರೆಸ್ಸಿಗರು ಬೀದಿನಾಯಿಗಳಲ್ಲ ನಿಯತ್ತಿನ ನಾಯಿಗಳು- ಡಿ.ಕೆ ಸುರೇಶ್

ಬೆಂಗಳೂರು,ಫೆಬ್ರವರಿ,17,2026 (www.justkannada.in):  ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ...

ನಾಯಕತ್ವ ಬದಲಾವಣೆ: ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿಲಿ- ಕಾಂಗ್ರೆಸ್ ಶಾಸಕ

ದಾವಣಗೆರೆ,ಫೆಬ್ರವರಿ,17,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಬಗ್ಗೆ ಮಾತುಕತೆ  ಆಗಿಲ್ಲ...

ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ

ಬೆಂಗಳೂರು ಫೆಬ್ರವರಿ,17,2026 (www.justkannada.in): ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ...