ಮೈಸೂರು,ಜೂನ್,18,2025 (www.justkannada.in): 3 ಲಕ್ಷ ರೂ.ಲಂಚ ಸ್ವೀಕರಿಸುವಾಗ ಮೈಸೂರು ಚೆಸ್ಕಾಂ ಎಇಇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚೆಸ್ಕಾಂ ವಿಜೆಲೆನ್ಸ್ ಅಧಿಕಾರಿ ದೀಪಕ್ ಲೋಕಾಯುಕ್ತ ಬಲೆಗೆ ಬಿದ್ದವರು. ಗುತ್ತಿಗೆದಾರ ನಸೀಂ ಬಳಿ ಹಣ ಪಡೆಯುವ ವೇಳೆ ಅಧಿಕಾರಿ ದೀಪಕ್ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಇನ್ಸ್ ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಅನಧಿಕೃತ ಸಂಪರ್ಕದ ಪೆನಾಲ್ಟಿ ಹಣ ಕಡಿಮೆ ಮಾಡಲು ದೀಪಕ್ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ನಡುವೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದು ಆರೋಪಿ ದೀಪಕ್ ಮತ್ತು 3 ಲಕ್ಷ ನಗದನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Key words: Mysore, AEE, bribe, Lokayukta
The post 3 ಲಕ್ಷ ರೂ.ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮೈಸೂರು ಚೆಸ್ಕಾಂ AEE appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




