15
March, 2026

A News 365Times Venture

15
Sunday
March, 2026

A News 365Times Venture

4,824 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ. ಬಿ. ಪಾಟೀಲ್

Date:

ಬೆಂಗಳೂರು,ಮಾರ್ಚ್,14,2026 (www.justkannada.in): ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ  13 ಜಿಲ್ಲೆಗಳಾದ್ಯಂತ  37 ಹೊಸ ಕೈಗಾರಿಕೆಗಳು ಮತ್ತು ಹೆಚ್ಚುವರಿ ಹೂಡಿಕೆಯ 2 ಯೋಜನೆಗಳ ಒಟ್ಟು   ₹4,824.31 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ʼಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್‌ ಟೆಕ್ಸ್‌ಟೈಲ್‌, ಕಂಪ್ರೆಸ್ಡ್‌ ಗ್ಯಾಸ್‌, ವೈಮಾಂತರಿಕ್ಷ, ಚಿನ್ನಾಭರಣ ತಯಾರಿಕೆ,ಎಲೆಕ್ಟ್ರಾನಿಕ್ಸ್‌, ಸಾಫ್ಟ್‌ ವೇರ್‌ ಹಾಗೂ ಪಂಚತಾರಾ ಹೋಟೆಲ್‌ ನಿರ್ಮಾಣ ಯೋಜನೆಗಳಿಗೆ  ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ ಹೊಸದಾಗಿ 14,525  ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆʼ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಮತ್ತು  ಮೂಲಸೌಲಭ್ಯ  ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್  ಅವರು ತಿಳಿಸಿದ್ದಾರೆ.

ಈ ಯೋಜನೆಗಳಲ್ಲಿ ಬಾಗ್ಮನೆ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ ನ  ₹494.65 ಕೋಟಿ ಮೊತ್ತದ ಐಟಿ ಮೂಲಸೌಲಭ್ಯ ಅಭಿವೃದ್ಧಿ, ಕರ್ನಾಟಕ ಬಂಗಾರು ಷುಗರ್ಸ್‌ ನ  ₹443.50 ಕೋಟಿಯ ಸಕ್ಕರೆ ಕಾರ್ಖಾನೆ, ಕ್ಲೆನೆ ಪ್ಯಾಕ್ಸ್‌ ನ  ₹376 ಕೋಟಿಯ ಟೆಕ್ನಿಕಲ್‌ ಟೆಕ್ಸ್‌ ಟೈಲ್‌ ಘಟಕ, ತ್ರಿಶೂಲ್‌ ಬಿಲ್ಡ್‌ ಟೆಕ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ನ  ₹ 300 ಕೋಟಿ ವೆಚ್ಚದ ಪಂಚತಾರಾ ಹೋಟೆಲ್‌, ಮುಧೋಳದಲ್ಲಿ ಟ್ರೌಲ್ಟ್‌ ಗ್ರಾಸ್‌ ನ   ₹257.77 ಕೋಟಿ ವೆಚ್ಚದ  ಕಂಪ್ರೆಸ್ಡ್‌ ಗ್ಯಾಸ್‌ ಘಟಕ, ತ್ಸುಯೊ ಮ್ಯಾನುಫ್ಯಾಕ್ಚರಿನ್‌ ನ  ₹ 250 ಕೋಟಿ ವೆಚ್ಚದಲ್ಲಿನ  ವಿದ್ಯುತ್‌ ಚಾಲಿತ ವಾಹನಗಳ ಮೋಟರ್‌ ಹಾಗೂ ಕಂಟ್ರೋಲರ್‌ ತಯಾರಿಕೆ ಘಟಕಗಳು ಪ್ರಮುಖವಾಗಿವೆʼ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

50 ಕೋಟಿ ರೂ.ಗೂ ಹೆಚ್ಚು ಹೂಡಿಕೆಯ 22 ಪ್ರಮುಖ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ರಾಜ್ಯದಲ್ಲಿ  ₹ 3908.68 ಕೋಟಿ ಹೂಡಿಕೆ ಆಗಲಿದೆ. 12,475 ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ.  ₹ 15 ಕೋಟಿಗಳಿಂದ  ₹50 ಕೋಟಿ ಒಳಗಿನ ಹೂಡಿಕೆಯ 15 ಹೊಸ ಯೋಜನೆಗಳಿಗೆ ನೀಡಿರುವ  ಅನುಮೋದನೆ ಫಲವಾಗಿ  ₹350.60 ಕೋಟಿ ಹೂಡಿಕೆ ಆಗಲಿದ್ದು, 1,750 ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ.ಹೆಚ್ಚುವರಿ ಹೂಡಿಕೆಯ 2 ಯೋಜನೆಗಳಿಗೆ ನೀಡಿರುವ ಅನುಮೋದನೆಯಿಂದ  ₹565.03 ಕೋಟಿ ಹೂಡಿಕೆಯಾಗಲಿದ್ದು, 300 ಜನರಿಗೆ ಉದ್ಯೋಗಾವಕಾಶ ಸಿಗಲಿವೆʼ ಎಂದು ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಡಾ. ಎನ್‌. ಸೆಲ್ವಕುಮಾರ್‌, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗುಂಜನ್‌ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ  ದೊಡ್ಡ ಬಸವರಾಜು  ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Key words: Rs 4,824 crore, investment, Minister, M. B. Patil

The post 4,824 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ. ಬಿ. ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯುದ್ದದ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಕೆ, ಜನರಲ್ಲಿ ಆತಂಕ ಉಂಟು ಮಾಡಿದೆ- ಪ್ರಧಾನಿ ಮೋದಿ

ಅಸ್ಸಾಂ, ಮಾರ್ಚ್, 14,2026 (www.justkannada.in):  ಯುದ್ದದ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಕೆಗಳನ್ನ...

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಹೆಚ್.ವೈ.ಮೇಟಿ ಕನಸು ನನಸು-ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಮಾರ್ಚ್,14,2026 (www.justkannada.in):  ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು  ಆಶಯದಂತೆ  ಸರ್ಕಾರಿ...

ಗೂಡ್ಸ್ ರೈಲು ಡಿಕ್ಕಿ : ಮೂವರು ಯುವಕರು ಸಾವು.

ಮುಂಬೈ,ಮಾರ್ಚ್,14,2026 (www.justkannada.in):  ಗೂಡ್ಸ್ ರೈಲು ರೈಲು ಡಿಕ್ಕಿಯಾಗಿ ಮೂವರು ಯುವಕರು ಪ್ರಾಣ...

ಕೆಂಪೇಗೌಡ ವೃತ್ತ (ಮಣಿಪಾಲ್ ಜಂಕ್ಷನ್) ಕಾಮಗಾರಿಗಳ ಪರಿಶೀಲಿಸಿದ ಸಂಸದ ಯದುವೀರ್

 ಮೈಸೂರು,ಮಾರ್ಚ್,14,2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ  ಯದುವೀರ್ ಕೃಷ್ಣದತ್ತ ಚಾಮರಾಜ...