31
March, 2026

A News 365Times Venture

31
Tuesday
March, 2026

A News 365Times Venture

6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ

Date:

ಹುಬ್ಬಳ್ಳಿ,ಮಾರ್ಚ್,30,2026 (www.justkannada.in):  6 ಲಕ್ಷ ರೂ.ಲಂಚ ಸ್ವೀಕರಿಸುವಾಗ ಕಮರ್ಷಿಯಲ್ ಟ್ಯಾಕ್ಸ್ ಡಿಸಿಯೊಬ್ಬರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗ್ಗಡೆ  ಲೋಕಾಯುಕ್ತ ಬಲೆಗೆ ಬಿದ್ದವರು. ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಲಾರಿ ಪೆಟ್ರೋಲ್  ಬಂಕ್ ಮಾಲೀಕನಿಗೆ 60 ಲಕ್ಷ ರೂ. ಜಿಎಸ್ ಟಿ ಕಟ್ಟಬೇಕು ಎಂದು ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗ್ಗಡೆ   ನೋಟಿಸ್ ನೀಡಿದ್ದರು.

ಹಣ ಕಡಿಮೆ ಮಾಡಬೇಕು ಕಟ್ಟದ ಹಾಗೆ ಮಾಡಬೇಕು ಅಂದರೆ 10 ಲಕ್ಷ ರೂ. ಲಂಚ ನೀಡುವಂತೆ ಭರತ್ ಹೆಗ್ಗಡೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ವಿಶ್ವನಾಥ್ ನಾಯಕ್ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ಹುಬ್ಬಳ್ಳಿಗೆ ಬಂದಿದ್ದ ಲೋಕಾಯುಕ್ತ ಪೊಲೀಸರು  ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗ್ಗಡೆಯನ್ನು ಟ್ರ್ಯಾಪ್ ಮಾಡಿದ್ದಾರೆ. 10 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ 6 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಭರತ್ ಹೆಗ್ಗಡೆ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

Key words: Commercial Tax ,DC, Lokayukta, trap, bribe

The post 6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತ್ರಿಭಾಷಾ ಸೂತ್ರ ತಂದಿದ್ದು ಮೋದಿಯಲ್ಲ, ನೆಹರು: ಅವರಿಗೂ ಬೆಲೆ ಇಲ್ವಾ? ‘ಕೈ’ಗೆ ಕುಟುಕಿದ ಆರ್. ಅಶೋಕ್

ಬೆಂಗಳೂರು,ಮಾರ್ಚ್,30,2026 (www.justkannada.in): ದೇಶದಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತಂದಿದ್ದು ಪ್ರಧಾನಿ ನರೇಂದ್ರ...

ಸಿಎಂ ಸೇರಿ ಇಡೀ ಸಂಪುಟ ಸಮೇತ ಬಂದರೂ ಕಾಂಗ್ರೆಸ್ ಗೆಲ್ಲಲ್ಲ- ಮಾಜಿ ಸಚಿವ ಶ್ರೀರಾಮುಲು

ಬಾಗಲಕೋಟೆ,ಮಾರ್ಚ್,30,2026 (www.justkannada.in): ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಇಡೀ ಸಚಿವ ಸಂಪುಟ...

 ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಅಂತ ಮುಸ್ಲೀಮರು ಬಿಜೆಪಿಗೆ ಮತ ಹಾಕಲ್ಲ-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಮಾರ್ಚ್,30,2026 (www.justkannada.in):  ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಮುಸ್ಲೀಮರ ಮತ ಪಡೆಯಲು...

ಬಿಜೆಪಿಯವರು ಕಳ್ಳೆತ್ತು: ಅವರಿಗೆ ವೋಟ್‍ ಹಾಕಬಾರದು- ಸಿಎಂ ಸಿದ್ಧರಾಮಯ್ಯ,

ಬಾಗಲಕೋಟೆ,ಮಾರ್ಚ್,30,2026 (www.justkannada.in):  ಬಿಜೆಪಿಯವರು ಕಳ್ಳೆತ್ತುಗಳು ಅವರಿಗೆ ಮತ ಹಾಕಬಾರದು ಎಂದು ಸಿಎಂ...