ಬೆಂಗಳೂರು,ಜೂನ್,15,2026 (www.justkannada.in): ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ನಾವು ಗ್ಯಾರಂಟಿ ಕೊಡುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಗ್ಯಾರಂಟಿಗಳಿಗೆ ದಾಖಲೆಬೇಕು ಫೋಟೊ ಬೇಕು. ಆಗ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ . ಆದರ ಹಣ ಯಾರದ್ದೋ ಅಕೌಂಟ್ ಗೆ ಹೋಗುತ್ತಿದೆ. ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿಗಳನ್ನ ಕೊಡುತ್ತೇವೆ. ನಾವು ಕರ್ನಾಟಕದವರಿಗೆ ಮಾತ್ರ ಗ್ಯಾರಂಟಿ ನೀಡುತ್ತೇವೆ ಎಂದರು.
ಗ್ಯಾರಂಟಿ ನಿಲ್ಲಿಸುತ್ತಾರೆ ಎಂಬ ಬಿಜೆಪಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ವಿರೋದ ಪಕ್ಷದವರು ಇರುವುದೇ ಟೀಕೆ ಮಾಡೋಕೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ವಿಪಕ್ಷಗಳ ಆರೋಪ ಸುಳ್ಳು. ಪಾಪ ವಿರೋಧ ಪಕ್ಷದವರು ಮಾತನಾಡುತ್ತಾ ಇರಲಿ ಎಂದರು. 
Key words: Guarantees, CM, DK Shivakumar, Vote
The post ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡ್ತೇವೆ- ಸಿಎಂ ಡಿ.ಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




