ಬೆಂಗಳೂರು,ಜೂನ್,22,2026 (www.justkannada.in): ನಿನ್ನೆ ಕಾಂಗ್ರೆಸ್ ಸಮಾವೇಶದಿಂದ ನೀಟ್ ಅಭ್ಯರ್ಥಿಗಳಿಗೆ ತೊಂದರೆಯಾದ ಬಗ್ಗೆ ಕೇಳಿ ಬಂದಿರುವ ಆರೋಪವನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಳ್ಳಿ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ನಿನ್ನೆ ನೀಟ್ ಇದತ್ತು ಎಂದು ಗೊತ್ತಿತ್ತು ಮುಂಜಾಗ್ರತಾ ಕ್ರಮ ಕೈಗೊಂಡಿದ್ದವು. ಸಮಾವೇಶದ ಅಕ್ಕಪಕ್ಕದಲ್ಲಿ ಮೂರು ಎಕ್ಸಾಂ ಸೆಂಟರ್ ಇತ್ತು ನಮ್ಮಿಂದ ಯಾವುದೇ ಲೋಪವಾಗಿಲ್ಲ ಎಂದರು.
ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು ಎಂಬ ವಿಚಾರ, ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು. ನಾವಾಗಿ ಹುಡುಕಿ ಕೊಡಬೇಕು. ಅವರು ಅರ್ಜಿ ಹಿಡಿದು ಬರಲ್ಲ. ನಾವೇ ಕಾರ್ಯಕರ್ತರ ಹಿಂದೆ ಹೋಗಬೇಕು. ಹರಿಪ್ರಸಾದ್ ಎಲ್ಲ ಕಡೆ ಯಶಸ್ವಿಯಾಗಿದ್ದಾರೆ. ಇಲ್ಲೂ ಯಶಸ್ವಿಯಾಗಲಿದ್ದಾರೆ ಎಂದರು.
Key words: Minister, Satish Jarkiholi, allegations, NEET candidates, Congress, convention
The post ‘ಕೈ’ ಸಮಾವೇಶದಿಂದ ನೀಟ್ ಅಭ್ಯರ್ಥಿಗಳಿಗೆ ತೊಂದರೆ ಆರೋಪ ತಳ್ಳಿ ಹಾಕಿದ ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




