24
June, 2026

A News 365Times Venture

24
Wednesday
June, 2026

A News 365Times Venture

ಅನಿತಾ ಕುಮಾರಸ್ವಾಮಿ ಜಮೀನು ಬಗ್ಗೆ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ ಪಾಟೀಲ್

Date:

ಬೆಂಗಳೂರು,ಜೂನ್,24,2026 (www.justkannada.in):  ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಬಳಿ 100 ಎಕರೆ ಜಮೀನು ಇದೆ ಎಂಬ ತಮ್ಮ ಹೇಳಿಕೆಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ಸಚಿವ ಎಂ.ಬಿ ಪಾಟೀಲ್ ಹೇಳಿಕೆ ಬಗ್ಗೆ ಕಿಡಿಕಾರಿ ಟ್ವೀಟ್ ಮಾಡಿದ್ದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ನನ್ನ ಬಳಿ ಇರುವುದು 100 ಎಕರೆ ಅಲ್ಲ 32 ಎಕರೆ ಮಾತ್ರ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲ್, ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿಯ ಹೆಸರಿನಲ್ಲಿ ಬಿಡದಿಯಲ್ಲಿ ಜಮೀನಿದೆ ಎಂದಿದ್ದರು. ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ ಅವರು 100 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.  ಒಂದು ವೇಳೆ ಅಲ್ಲಿ ಅಷ್ಟು ಜಮೀನು ಇಲ್ಲದಿದ್ದರೆ ಅವರು ಆಗಲೇ ಸ್ಪಷ್ಟೀಕರಣ ನೀಡಬೇಕಿತ್ತು. ನಮ್ಮ ಭೂಮಿ ಇಲ್ಲ ಎಂದು ಹೇಳಿದರೆ ಇಲ್ಲಿಗೆ ಮುಗಿದು ಹೋಗುತ್ತಿತ್ತು ಎಂದರು.

ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ನಮಗೆ ಸಹೋದರಿ ಇದ್ದಂತೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು  ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

Key words: Minister, M.B. Patil, Anitha Kumaraswamy, land

The post ಅನಿತಾ ಕುಮಾರಸ್ವಾಮಿ ಜಮೀನು ಬಗ್ಗೆ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPMA ಅಡಿ ನೋಂದಣಿಯಾಗದ ಡಿ-ಅಡಿಕ್ಷನ್ ಕೇಂದ್ರಗಳ ವಿರುದ್ಧ ಕ್ರಮ: ಮೈಸೂರು ಡಿ.ಸಿ ಲಕ್ಷ್ಮಿಕಾಂತ್ ರೆಡ್ಡಿ

ಮೈಸೂರು,ಜೂನ್,24,2026 (www.justkannada.in): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವ್ಯಸನ ವಿಮುಕ್ತ ಕೇಂದ್ರಗಳು (De-addiction...

ಸಂಬಂಧಿ ಮೇಲೆ ಇಡಿ ದಾಳಿ ವಿಚಾರ: ನಾಳೆ ಮಾತನಾಡುತ್ತೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,24,2026 (www.justkannada.in): ತಮ್ಮ ಸಂಬಂಧಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ...

ನೀಟ್ ನಲ್ಲಿ ಅಕ್ರಮ: ಪ್ರತಿ ಬಾರಿ ಪ್ರಶ್ನೆ ಮಾಡಿದ್ರೂ ಯಾವುದೇ ಸುಧಾರಣೆ ಇಲ್ಲ- ಸಚಿವ ಶರಣಪ್ರಕಾಶ್ ಪಾಟೀಲ್

ಕಲಬುರುಗಿ,ಜೂನ್,24,2026 (www.justkannada.in): ಹಲವು ವರ್ಷಗಳಿಂದ ನೀಟ್ ನಲ್ಲಿ ಅಕ್ರಮ ನಡೆಯುತ್ತಿದೆ. ಪ್ರತಿಬಾರಿಯೂ...

ಮೈಸೂರು: ‘ಮನೆ‌ ಮನೆ ಹನುಮ’ ಕಾರ್ಯಕ್ರಮ ಚಾಲನೆ

ಮೈಸೂರು,ಜೂನ್,24,2026 (www.justkannada.in): ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಸರಸ್ವತಿ ಭಾರತೀಯ...