ಬಾಗಲಕೋಟೆ,ಜೂನ್,26,2026 (www.justkannada.in): ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿರುವುದು ಸ್ಪಷ್ಟ. ಆದರೆ ಆಣೆ ಪ್ರಮಾಣ ಮಾಡಿ ಅಂತಾ ಬಿವೈ ವಿಜಯೇಂದ್ರ ಹೇಳಿದ್ದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಆಕ್ಷೇಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮುರುಗೇಶ್ ನಿರಾಣಿ, ಅಡ್ಡ ಮತದಾನ ಮಾಡಿದ್ದು ಯಾರು ಅಂತಾ ಗುರುತಿಸುವುದು ಕಷ್ಟ. ಗೌಪ್ಯ ಮತದಾನ ಇರುವುದರಿಂದ ಕಂಡುಹಿಡಿಯುವುದು ಕಷ್ಟ. 200 ಕಳ್ಳರು ತಪ್ಪಿಸಿಕೊಂಡರೂ ಒಬ್ಬ ನಿಷ್ಠಾವಂತನಿಗೆ ಶಿಕ್ಷೆ ಆಗಬಾರದು. ಮುಂದಿನ ದಿನಗಳಲ್ಲಿ ಈ ರೀತಿ ರಿಪೀಟ್ ಆದರೆ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಆಣೆ ಪ್ರಮಾಣ ಮಾಡಿ ಅಂತಾ ವಿಜಯೇಂದ್ರ ಹೇಳಿದ್ದು ಸರಿಯಲ್ಲ. ಮಾತು ವಾಪಸ್ ಪಡೆಯುತ್ತೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ ಅಡ್ಡಮತದಾನ ಮಾಡಿದವರು ಯಾರು ಎಂದು ತಿಳಿದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮುರುಗೇಶ್ ನಿರಾಣಿ ತಿಳಿಸಿದರು.
Key words: Cross voting, BY Vijayendra, Murugesh Nirani
The post ಆಣೆ ಪ್ರಮಾಣ ಮಾಡಿ ಅಂತಾ ವಿಜಯೇಂದ್ರ ಹೇಳಿದ್ದು ಸರಿಯಲ್ಲ- ಮುರುಗೇಶ್ ನಿರಾಣಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




