ರಾಮನಗರ,ಜೂನ್,29,2026 (www.justkannada.in): ಬಿಡದಿ ಟೌನ್ ಶಿಪ್ ನಿರ್ಮಾಣ ವಿರುದ್ದ ರೈತರ ಜೆಡಿಎಸ್ ನ ಹೋರಾಟದಿಂದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, 2006ರಲ್ಲಿ ಈ ಟೌನ್ ಶಿಪ್ ಯೋಜನೆ ಆರಂಭವಾಗಿದ್ದು. ಹೆಚ್ ಡಿಕೆ ಟೌನ್ ಶಿಪ್ ಯೋಜನೆ ಶುರು ಮಾಡಿದ್ದು. ಹೆಚ್ ಡಿ ಕುಮಾರಸ್ವಾಮಿ 2 ಬಾರಿ ಸಿಎಂ ಆದಾಗಲೂ ಯೋಜನೆ ಕೈಬಿಡಲಿಲ್ಲ ಡಿಕೆ ಶಿವಕುಮಾರ್ ಸಿಎಂ ಆದ ನಂತರ ಜೆಡಿಎಸ್, ಹೆಚ್ ಡಿಕೆಗೆ ತೊಂದರೆ ಆಗುತ್ತಿದೆ ಎಂದು ಟೀಕಿಸಿದರು.
ರಾಜಕೀಯವಾಗಿ ಟೌನ್ ಶಿಪ್ ಯೋಜನೆ ಬಳಿಸಿಕೊಳ್ಳುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ತೊಂದರೆ ಪ್ರಾರಂಭವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: Protest, against, Bidadi Township,government, Minister, M.B. Patil
The post ಬಿಡದಿ ಟೌನ್ ಶಿಪ್ ವಿರುದ್ದ ಹೋರಾಟ: ಸರ್ಕಾರಕ್ಕೆ ಯಾವುದೇ ಪರಿಣಾಮವಾಗಲ್ಲ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




