1
July, 2026

A News 365Times Venture

1
Wednesday
July, 2026

A News 365Times Venture

ಜೆಡಿಎಸ್-ಬಿಜೆಪಿ ಗೂಂಡಾವರ್ತನೆ; ಸಿದ್ದು ಎದುರು ಕಣ್ಣೀರಿಟ್ಟ ಪ್ರದೀಪ್

Date:

ಬೆಂಗಳೂರು,ಜೂನ್,30,2026 (www.justkannada.in): ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಂಪೇಗೌಡ ಜಯಂತಿ ವೇಳೆ ನಡೆದ ಘಟನೆಯನ್ನು ವಿವರಿಸಿದರು.

ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂಬವನ್ನು ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಈಶ್ವರ್ ಅವರು ಕಣ್ಣೀರು ಹಾಕಿದರು.

ಪ್ರದೀಪ್ ಅವರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಇಂಥಹ ಘಟನೆಗಳು ಸಾಮಾನ್ಯ. ಇಂಥವನ್ನು ಎದುರಿಸಬೇಕು. ಇದರಿಂದ ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ತಿಳಿಸಿದರು.

ಪೋಲೀಸರ ಸಮ್ಮುಖದಲ್ಲೇ ಅದರಲ್ಲೂ ಆಡಳಿತ ಪಕ್ಷದ ಶಾಸಕರಿಗೆ ಈ ರೀತಿ ಆಗಿರುವುದರ ಬಗ್ಗೆ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.  ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರಗಿಸಬೇಕು ಎಂದರು.

ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಮಧು ಬಂಗಾರಪ್ಪ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Key words: JDS-BJP, Pradeep Eshwar, tears, Former CM, Siddaramaiah

The post ಜೆಡಿಎಸ್-ಬಿಜೆಪಿ ಗೂಂಡಾವರ್ತನೆ; ಸಿದ್ದು ಎದುರು ಕಣ್ಣೀರಿಟ್ಟ ಪ್ರದೀಪ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹಲವು IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಬೆಂಗಳೂರು, ಜೂನ್,30,2026 (www.justkannada.in): ರಾಜ್ಯ ಸರ್ಕಾರ ಮಂಗಳವಾರ ಹಲವು ಐಎಎಸ್ ಅಧಿಕಾರಿಗಳಿಗೆ...

Mysore Traffic Signal: ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ ಎಂದ ಪಾಲಿಕೆ..!

ಮೈಸೂರು, ಜೂನ್ 30,2026 (www.justkannada.in): ನಗರದ ವಿವಿಧ ರಸ್ತೆಗಳಲ್ಲಿ ಕಳೆದ ಮೂರು...

ಪೊಲೀಸ್ ಅಧಿಕಾರಿಗಳ ಮಾಧ್ಯಮ ಸಂಪರ್ಕಕ್ಕೆ ನಿರ್ಬಂಧ: ಡಿಜಿಪಿ ಎಂ.ಎ. ಸಲೀಂ ಸುತ್ತೋಲೆ

ಬೆಂಗಳೂರು, ಜೂನ್,29,2026 (www.justkannada.in): ಅಧಿಕೃತ ಮಾಹಿತಿಯ ಅನಧಿಕೃತ ಬಹಿರಂಗಪಡಿಸುವಿಕೆಯನ್ನು ತಡೆಯಲು ಕರ್ನಾಟಕ...

ರೇಷ್ಮೆ ಕೃಷಿಯು ರೈತ ಸಮುದಾಯಕ್ಕೆ ಜೀವನೋಪಾಯವಾಗಿದೆ- ಆಯುಕ್ತೆ ಶಿಲ್ಪಾನಾಗ್

ಮೈಸೂರು,ಜೂನ್,30,2026 (www.justkannada.in): ರೇಷ್ಮೆ ಕೃಷಿಯು ರೈತ ಸಮುದಾಯದ ಜೀವನೋಪಾಯವಾಗಿದೆ ಎಂದು ರೇಷ್ಮೆ...