ಬೆಂಗಳೂರು,ಮಾರ್ಚ್,8,2025 (www.justkannada.in): ಸಿಎಂ ಸಿದ್ದರಾಮಯ್ಯರನ್ನ ಖುಷಿಪಡಿಸಲು ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು.
ಬಜೆಟ್ ಬಗ್ಗೆ ಈಗ ಬಿಜೆಪಿಗರು ಮಾತನಾಡುವ ಸ್ಥಿತಿಯಲ್ಲಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಸಿದ್ದರಾಮಯ್ಯರನ್ನ ಖುಷಿ ಪಡಿಸಿದ್ರೆ ಸಿಎಂ ಆಗಬಹುದೆಂಬ ಬ್ರಮೆ ಡಿಕೆ ಶಿವಕುಮಾರ್ ಗೆ ಇದೆ. ಅದು ಅವರ ಭ್ರಮೆ ಮಾತ್ರ. ಡಿಕೆ ಶಿವಕುಮಾರ್ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನ ಖುಷಿ ಪಡಿಸಲು ಈ ರೀತಿ ಟೀಕೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಡಿಕೆ ಶಿವಕುಮಾರ್ ಯಶಸ್ಸಾಗಲ್ಲ ಎಂದರು.
ಬೆಂಗಳೂರು ನಗರ ವಿವಿಗೆ ಮನಮೋಹನ್ ಸಿಂಗ್ ಹೆಸರಿಡುವ ವಿಚಾರ, ಇದಕ್ಕೆಲ್ಲ ಸದನದಲ್ಲಿ ಚರ್ಚೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: DK Shivakumar, criticizes, BJP , Siddaramaiah, BY Vijayendra
The post ಸಿದ್ದರಾಮಯ್ಯರನ್ನ ಖುಷಿ ಪಡಿಸಲು ಬಿಜೆಪಿ ಬಗ್ಗೆ ಡಿಕೆಶಿ ಟೀಕೆ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




