ಬೆಂಗಳೂರು,ಜುಲೈ,15,2026 (www.justkannada.in): ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರ ಪರ ಧರಣಿ ಕೂರುವುದಾಗಿ ತಿಳಿಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಟಾಂಗ್ ಕೊಟ್ಟಿರುವ ಶಾಸಕ ಹೆಚ್ ಸಿ ಬಾಲಕೃಷ್ಣ, ದೇವೇಗೌಡರು ಮೇಕೆದಾಟು ಮಹದಾಯಿಗಾಗಿ ಮೋದಿಯವರ ಮುಂದೆ ಧರಣಿ ಮಾಡಲಿ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ, ಬಿಡದಿ ವಿಚಾರದಲ್ಲಿ ದೇವೇಗೌಡರು ಧರಣಿ ಕೂರುವುದು ಬೇಡ. ದೇವೇಗೌಡರಿಗೆ ಜ್ವಲಂತ ಸಮಸ್ಯೆ ಬಗ್ಗೆ ಹೋರಾಡಬೇಕೆಂದು ಅನಿಸಿಲ್ವಾ? ದೇವೇಗೌಡರು ಮೋದಿಯವರ ಜೊತೆಗೆ ಆಪ್ತರಾಗಿದ್ದಾರೆ ಮೇಕೆದಾಟು ಮಹದಾಯಿ ಬಗ್ಗೆ ಯಾಕೆ ಒತ್ತಡ ಹಾಕ್ತಿಲ್ಲ? ಹಾಸನದಲ್ಲಿ 2 ಸಾವಿರ ಎಕರೆ ಜಮೀನು ಭೂಸ್ವಾಧೀನ ಆಗಿದೆ. ಅಲ್ಲಿನ ರೈತರ ಬಗ್ಗೆ ದೇವೇಗೌಡರು ಯಾಕೆ ಮಾತನಾಡುತ್ತಿಲ್ಲ. ಪುತ್ರ ವ್ಯಾಮೋಹವನ್ನು ದೇವೇಗೌಡರು ಬಿಡಬೇಕು ಕುಮಾರಸ್ವಾಮಿ ನಿಖಿಲ್ ಮೆಚ್ಚಿಸಲು ದೇವೇಗೌಡರು ಧರಣಿ ಕೂತರೆ ನಾವೇನು ಮಾಡುವುದಕ್ಕಾಗಲ್ಲ ಇದೇ ಧರಣಿಯನ್ನ ಮೋದಿಯವರ ಮುಂದೆ ಮಾಡಲಿ ಮೇಕೆದಾಟು ಮಹದಾಯಿಗಾಗಿ ದೇವೇಗೌಡರು ಧರಣಿ ಮಾಡಲಿ ಎಂದರು.
ರೈತರ ಮೇಲೆ ಎಫ್ ಐಆರ್ ಹಾಕಿಲ್ಲ. ಯಾರು ಗಲಾಟೆ ಮಾಡಿದ್ದಾರೆ ಅವರ ಮೇಲೆ ಕೇಸ್ ಮಾಡಿದ್ದಾರೆ ಅಧಿಕಾರಿಗಳ ಮೇಲೆ ಕೈ ಮಾಡಿದಾಗ ಅವರು ದೂರು ಕೊಟ್ಟಿದ್ದರು. ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಕೇಸ್ ಆಗಿದೆ. ಅಧಿಕಾರಿಗಳಿಗೆ ಹೊಡೆದಾಗ ಅವರೇನ್ ಮಾಡುತ್ತಾರೆ ಎಂದು ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.
Key words: HD Deve Gowda, Modi, Mekedatu, Mahadayi, MLA, HC Balakrishna
The post ದೇವೇಗೌಡರು ಮೇಕೆದಾಟು ಮಹದಾಯಿಗಾಗಿ ಮೋದಿಯವರ ಮುಂದೆ ಧರಣಿ ಮಾಡಲಿ- ಶಾಸಕ ಹೆಚ್ ಸಿ ಬಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




