ಬೆಂಗಳೂರು,ಆಗಸ್ಟ್,3,2026 (www.justkannada.in): ರಾಜ್ಯ ಸಚಿವ ಸಂಪುಟ ರಚನೆ ಕ್ಷಣಗಣನೆ ಆರಂಭವಾಗಿದ್ದು ನೂತನ ಸಚಿವರಾಗುವವರ ಪಟ್ಟಿ ಬಿಡುಗಡೆಯಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಿಂದ ನೂತನ ಸಚಿವ ಪಟ್ಟಿ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದ್ದು ಪಟ್ಟಿಯಲ್ಲಿ , ಜಮೀರ್ ಅಹ್ಮದ್ ಖಾನ್, ಶಿವರಾಜ್ ತಂಗಡಗಿ, ಹೆಚ್ ಸಿ ಬಾಲಕೃಷ್ಣ, ಅಜಯ್ ಸಿಂಗ್ , ಕೆಎಸ್ ಬಸವಂತಪ್ಪ, ಶಿವಲಿಂಗೇಗೌಡ, ಲಕ್ಷ್ಮಣ್ ಸವದಿ ಅವರ ಹೆಸರು ಇದೆ.
ಹಾಗೆಯೇ ರುದ್ರಪ್ಪ ಲಮಾಣಿ , ಬಿ,ನಾಗೇಂದ್ರ, ವಿಜಯಾನಂದ ಕಾಶಪ್ಪನವರ್ , ಚಲುವರಾಯಸ್ವಾಮಿ , ಟಿ.ರಘುಮೂರ್ತಿ ರಿಜ್ವನ್ ಅರ್ಷಾದ್ ,ಪುಟ್ಟರಂಗಶೆಟ್ಟಿ , ಮಧು ಬಂಗಾರಪ್ಪ ಸಂತೋಷ್ ಲಡ್ ಮಂಕಾಳು ವೈದ್ಯ, ಗಾಯಿತ್ರಿ ಶಾಂತಗೌಡ, ಬಸವರಾಜ ರಾಯರೆಡ್ಡಿ ಅವರ ಹೆಸರು ಇದೆ.
ಹಾಗೆಯೇ ವಿಧಾನಸಭೆ ಸ್ಪೀಕರ್ ಆಗಿ ಜಿಎಸ್ ಪಾಟೀಲ್, ಉಪಸಭಾಪತಿಯಾಗಿ ಎಎಸ್ ಪೊನ್ನಣ್ಣಗೆ ಸ್ಥಾನ ಸಿಕ್ಕಿದೆ.

ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟ ಸೇರಲು ನೂತನ ಸಚಿವರು ಸಜ್ಜಾಗಿದ್ದು, ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ.
Key words: cabinet expansion, List, new ministers, released
The post ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ… appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




