7
August, 2026

A News 365Times Venture

7
Friday
August, 2026

A News 365Times Venture

ಪಕ್ಷದಿಂದ ಅನ್ಯಾಯ ಆಗಿದೆ ಅಂತಾ ಖರ್ಗೆ ಅವರು ಒಂದು ಬಾರಿಯಾದ್ರೂ ಹೇಳಿದ್ರಾ? ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

Date:

ಬೆಂಗಳೂರು,ಆಗಸ್ಟ್,5,2026 (www.justkannada.in): ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ಸಿಗದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಅಸಮಾಧಾನಿತ ಶಾಸಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಸಿಗದ ವಿಚಾರವನ್ನು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ,  ಮುಖ್ಯಮಂತ್ರಿ ಆಗುವ ಅವಕಾಶ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ರಾ?  ಒಂದು ಬಾರಿಯಾದರೂ ಪಕ್ಷದಿಂದ ಅನ್ಯಾಯ ಆಗಿದೆ ಅಂತಾ ಏನಾದರೂ ಹೇಳಿದ್ರಾ?   ಎಂದರು.

ರಾಜೀನಾಮೆ ಕೊಟ್ಟರೆ ಸ್ವೀಕಾರ ಮಾಡುತ್ತೇವೆ ಎಂದು ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪಕ್ಷ ಕಟ್ಟುವುದು ಎಲ್ಲರಿಗೂ ಗೊತ್ತಿದೆ.  ಜನರು ಕೂಡ ರಾಜಕಾರಣಿಗಳನ್ನ ನೋಡುತ್ತಿದ್ದಾರೆ  ಸಚಿವ ಸಂಫುಟದಲ್ಲಿ ಇರುವ ನಮ್ಮಂತಹವರನ್ನ ನೋಡುತ್ತಿದ್ದಾರೆ. ಸಂಪುಟದಿಂದ ಹೊರಗುಳಿದವರನ್ನೂ ಕೂಢ ನೋಡುತ್ತಿದ್ದಾರೆ. ಪಕ್ಷದ ವಿರುದ್ದ ಮಾತನಾಡುತ್ತಿರುವವರನ್ನೂ ಕೂಢ ನೋಡುತ್ತಿದ್ದಾರೆ.  ಕಾರ್ಯಕರ್ತರು, ಮತದಾರರು ಇಲ್ಲ ಅಂದ್ರೆ ನಾನು ಏನೂ ಅಲ್ಲ.  ನಾನು ಪಕ್ಷ ಹಾಗೂ ಕಾರ್ಯಕರ್ತರಿಗೆ ಚಿರ ಋಣಿಯಾಗಿರುತ್ತೇನೆ.  ಪಕ್ಷದ ವರ್ಚಸ್ಸಿನಿಂದ ನಾವಿದ್ದೇವೆಂದು ಯಾರು ಮರೆಯಬಾರದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Key words: Mallikarjuna Kharge, CM Post, injustice, party, Minister, Priyank Kharge

 

The post ಪಕ್ಷದಿಂದ ಅನ್ಯಾಯ ಆಗಿದೆ ಅಂತಾ ಖರ್ಗೆ ಅವರು ಒಂದು ಬಾರಿಯಾದ್ರೂ ಹೇಳಿದ್ರಾ? ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಬಿಜಿಎಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕೀರ್ತನಾ ಸಾವು

  ಮೈಸೂರು, ಆ. 7: ನಗರದ ಕುವೆಂಪುನಗರದ ಜ್ಞಾನಗಂಗಾ ಶಾಲೆ ಸಮೀಪ ಶುಕ್ರವಾರ...

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬೆಂಗಳೂರು, ಆಗಸ್ಟ್​​,7,2026 (www.justkannada.in): . ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ...

ನನ್ನ ಅವಶ್ಯಕತೆ ಇರಲಿಲ್ಲವೇನೋ? ಅದಕ್ಕೆ ಕಡೇ ಕ್ಷಣದಲ್ಲಿ ಕೈ ಬಿಟ್ಟಿದ್ದಾರೆ- ಮಂಕಾಳವೈದ್ಯ

ಮೈಸೂರು,ಆಗಸ್ಟ್,7,2026 (www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಮಂತ್ರಿಗಿರಿ ಕೈತಪ್ಪಿದ...

ಮೂಲಸೌಕರ್ಯಗಳೊಂದಿಗೆ ಬೀದರ್ ನಗರದ ಸಮಗ್ರ ಅಭಿವೃದ್ಧಿಗೆ ಬದ್ಧ- ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ.

ಬೀದರ್,ಆಗಸ್ಟ್,5,2026 (www.justkannada.in):  ಬೀದರ್ ನಗರದ ಸಮಗ್ರ ಅಭಿವೃದ್ಧಿ, ನಾಗರಿಕರ ಮೂಲಭೂತ ಸೌಕರ್ಯ...