14
November, 2025

A News 365Times Venture

14
Friday
November, 2025

A News 365Times Venture

ಮೈಸೂರಿನಲ್ಲಿ ‘LIC MF’ ಎರಡನೇ ಶಾಖೆಗೆ ಚಾಲನೆ

Date:

ಮೈಸೂರು, ಮಾರ್ಚ್, 12,2025 (www.justkannada.in):  ಭಾರತದ ವಿಶ್ವಾಸನೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳಲ್ಲಿ ಒಂದಾಗಿರುವ ಎಲ್‌ಐಸಿ ಮ್ಯೂಚುವಲ್‌ ಫಂಡ್‌ (LIC MF) ಮೈಸೂರಿನಲ್ಲಿ ತನ್ನ ಎರಡನೇ ಶಾಖೆಯನ್ನು ಆರಂಭಿಸಿದೆ. ಎಲ್‌ಐಸಿ ಎಂಎಫ್‌ ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ರವಿ ಕುಮಾರ್‌ ಝಾ ಅವರು ಇಂದು ಹೊಸ ಶಾಖೆಯನ್ನು ಉದ್ಘಾಟಿಸಿದರು.

ಮೈಸೂರು ಸಾಂಸ್ಕೃತಿಕವಾಗಿ ಶ್ರೀಮಂತ ನಗರವಾಗಿದ್ದು ರಾಜ್ಯದ ದಕ್ಷಿಣದ ಕೇಂದ್ರ ಭಾಗದಲ್ಲಿದೆ. ಅಸೋಸಿಯೇಷನ್‌ ಆಫ್‌ ಮ್ಯೂಚುವಲ್‌ ಫಂಡ್ಸ್‌ ಇನ್‌ ಇಂಡಿಯಾ (ಎಎಂಎಫ್‌ಐ) ಸಂಸ್ಥೆಯ ಪ್ರಕಾರ ಈ ಪ್ರಾಂತ್ಯದಲ್ಲಿ ಎಲ್‌ಐಸಿ ಕಂಪೆನಿಯ ನಿರ್ವಹಣೆಯಡಿ ಬರುವ ಸಂಪತ್ತಿನ ಮೌಲ್ಯ (ಎಯುಎಂ) 2024ರ ಡಿಸೆಂಬರ್‌ 31ಕ್ಕೆ ಅನ್ವಯವಾಗುವಂತೆ 8,000 ಕೋಟಿ ರೂಪಾಯಿಗಳಾಗಿವೆ. ಒಟ್ಟು ಎಯುಎಂನ ಶೇ 1.17ರಷ್ಟಿದೆ. ಒಟ್ಟು ಎಯುಎಂ 2025ರ ಫೆಬ್ರುವರಿ 28ಕ್ಕೆ ಅನ್ವಯವಾಗುವಂತೆ 36,209 ಕೋಟಿ ರೂಪಾಯಿಗಳಾಗಿವೆ.

ಮ್ಯೂಚುವಲ್‌ ಫಂಡ್‌ ವಹಿವಾಟು ಅಭಿವೃದ್ಧಿಗೆ ಕರ್ನಾಟಕದಲ್ಲಿ ಅಪಾರವಾದ ಅವಕಾಶಗಳಾಗಿವೆ. ರಾಜ್ಯವಾರು ಮಾಸಿಕ ಎಯುಎಂನಲ್ಲಿ (ಎಎಯುಎಂ) ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. 2025ರ ಜನವರಿಯಲ್ಲಿ ಕರ್ನಾಟಕದ ಎಎಯುಎಂ 4.72 ಲಕ್ಷ ಕೋಟಿ ರೂಪಾಯಿಗಳಾಗಿವೆ. ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಎಯುಎಂ ಇದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲ್‌ ಐಸಿ ಎಂಎಫ್‌ ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ರವಿ ಕುಮಾರ್‌ ಝಾ ಅವರು “ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮ್ಯೂಚುವಲ್‌ ಫಂಡ್‌ ಉದ್ಯಮ ಅಭಿವೃದ್ಧಿ ಕಾಣುವ ನಿರೀಕ್ಷೆ ಇದ್ದು, ಮೈಸೂರಿನಲ್ಲಿ ನಾವು ಈ ಕಾರಣಕ್ಕಾಗಿಯೇ ನಮ್ಮ ವಹಿವಾಟನ್ನು ವಿಸ್ತರಿಸುತ್ತಿದ್ದೇವೆ. ಮೈಸೂರು ಜ್ಞಾನಾಧಾರಿತ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸಾಂಸ್ಕೃತಿಕವಾಗಿಯೂ ಈ ನಗರ ಅಭಿವೃದ್ಧಿ ಹೊಂದಿದೆ. ಹೆಚ್ಚು ಆದಾಯದ ಜನರು ಮತ್ತು ವೃತ್ತಿಪರರು ಈ ನಗರವನ್ನು ತಮ್ಮ ವಾಸಸ್ಥಾನವಾಗಿ ಹೆಚ್ಚು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎರಡನೇ ಶಾಖೆಯ ಆರಂಭದ ಮೂಲಕ ಇಲ್ಲಿಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ” ಎಂದು ತಿಳಿಸಿದರು.

ಹೊಸ ಶಾಖೆಯ ವಿಳಾಸ ಹೀಗಿದೆ; ಎಲ್‌ಐಸಿ ಎಂಎಫ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌, ನಂ. 245, 12ನೇ ಮುಖ್ಯರಸ್ತೆ, 5ನೇ ಕ್ರಾಸ್‌, ಸರಸ್ವತಿಪುರಂ, ಜವರೇಗೌಡ ಪಾರ್ಕ್‌ ಎದುರು, ಮೈಸೂರು 570009

Key words: LIC MF, launches, second branch, Mysore

The post ಮೈಸೂರಿನಲ್ಲಿ ‘LIC MF’ ಎರಡನೇ ಶಾಖೆಗೆ ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...