ಬೆಂಗಳೂರು,ಆಗಸ್ಟ್,22,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್, ಕುಂಟು ನೆಪ ಇಟ್ಟುಕೊಂಡು ವಿಪಕ್ಷ ಸದನ ನಡೆಸಲು ಬಿಡುತ್ತಿಲ್ಲ.. ನಾಗೇಂಧ್ರ ವಿಚಾರದಲ್ಲಿ ಈಗಾಗಲೇ ಅವರು ಉತ್ತರ ಕೊಟ್ಟಾಗಿದೆ. ಅವರ ವಿರುದ್ದ ಸ್ಪಷ್ಟ ಆರೋಪಗಳಿದ್ದರೆ ಸಾಕ್ಷಿ ಮೂಲಕ ಹೇಳಲಿ. ಹಿಂದೆ ಆರೋಪ ಬಂದಾಗ ನಾವೇ ರಾಜೀನಾಮೆ ಕೊಡಿ ಎಂದಿದ್ದವು. ಎಸ್ಐಟಿ ತನಿಖೆಯಾಗಿ ದುಡ್ಡು ಕೊಡ ವಾಪಸ್ ಬಂದಿದೆ. ನಾಗೇಂದ್ರ ಭಾಗಿಯಾಗಿಲ್ಲ ಎಂಬ ಮಾಹಿತಿ ಕೂಡ ನಮಗೆ ಬಂದಿದೆ. ಬರಗಾಲ ನಿರ್ವಹಣೆಗೆ ಕೇಂದ್ರ ಸರ್ಕಾರ ನೆರವು ನೀಡಬೇಕು ಇದನ್ನೆಲ್ಲ ಮಾಡುವುದು ಬಿಟ್ಟು ಅಧಿವೇಶನ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ನಾಗೇಂದ್ರ ವಿರುದ್ದ ಪಾಸ್ರಿಕ್ಯೂಸನ್ ಗೆ ರಾಜ್ಯಪಾಲರಿಗೆ ಸಿಬಿಐ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಸಿಬಿಐ ವಿಚಾರ ನಮಗೆ ಗೊತ್ತೇ ಇದೆ. ಬಿಜೆಪಿಗೆ ಅನುಕೂಲ ಆಗೋ ರೀತಿ ಇಡಿ ಐಟಿ ಸಿಬಿಐ ಕೆಲಸ ಮಾಡುತ್ತೆ. ಇದರ ಬಗ್ಗೆ ನಾನು ಸಾಕ್ಷಿ ಕೊಡುವುದು ಬೇಕಿಲ್ಲ ದೇಶಕ್ಕೆ ಗೊತ್ತು. ಕಾಂಗ್ರೆಸ್ ಶಾಸಕರಿಗೆ ತೊಂದರೆ ಕೊಡುವುದೇ ಅವರ ಅಜೆಂಡಾ. ಇಷ್ಟು ದಿನ ಸಿಬಿಐ ಅಧಿಕಾರಿಗಳು ಯಾಕೆ ಸುಮ್ಮನಿದ್ದರು? ಈಗ ಯಾಕೆ ಪತ್ರ ಬರೆದಿದ್ದಾರೆ? ಕಾಂಗ್ರೆಸ್ ಗೆ ಕೆಟ್ಟ ಹೆಸರು ತರುವ ಹುನ್ನಾರವಿದು ಎಂದು ಟೀಕಿಸಿದರು.
Key words: Former minister, Dinesh Gundu Rao, BJP, protests, resignation, B. Nagendra
The post ಕುಂಟು ನೆಪವಿಟ್ಟುಕೊಂಡು ಸದನ ನಡೆಸಲು ಬಿಡುತ್ತಿಲ್ಲ: ಸ್ಪಷ್ಟ ಆರೋಪಗಳಿದ್ದರೆ ಸಾಕ್ಷಿ ಮೂಲಕ ಹೇಳಲಿ- ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




