ಬೆಂಗಳೂರು,ಆಗಸ್ಟ್,25,2026 (www.justkannada.in): ಈ ಬಾರಿ ಅಧಿವೇಶನದಿಂದ ಯಾವ ಅನುಕೂಲ ಆಗಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ, ಈ ವಿಚಾರವನ್ನು ನನ್ನ ಬದಲು ವಿರೋಧ ಪಕ್ಷದವರನ್ನ ಕೇಳಬೇಕು ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ, ಯಾವುದಕ್ಕಾಗಿ ಸದನ ಹಾಳು ಮಾಡಿದರು ಎಂದು ವಿಪಕ್ಷದವರನ್ನ ಕೇಳಬೇಕು. ಚರ್ಚೆ ಮಾಡಿ ಸರ್ಕಾರ ಉತ್ತರ ಕೊಡುತ್ತೆ ಎಂದು ನಾವು ಹೇಳಿದ್ದವು. ಪ್ರತಿಭಟನೆಯಿಂದಾಗಿ ಅಧಿವೇಶನ ಸರಿಯಾಗಿ ನಡೆದಿಲ್ಲ. ಈ ವಿಚಾರವನ್ನು ನನ್ನ ಬದಲು ವಿರೋಧ ಪಕ್ಷದವರನ್ನ ಕೇಳಬೇಕು ಎಂದರು.
ನಾಗೇಂದ್ರ ವಿರುದ್ದ ಆರೋಪ ಸಾಬೀತು ಆಗಿಲ್ಲ. ರಾಜ್ಯದಲ್ಲಿ ಬರಗಾಲ ಇದೆ. ಅದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ಕಿಡಿಕಾರಿದರು.
Key words: Opposition parties, responsibility, Minister, Laxman Savadi
The post ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ-BJP ವಿರುದ್ದ ಸಚಿವ ಲಕ್ಷ್ಮಣ್ ಸವದಿ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




