29
August, 2026

A News 365Times Venture

29
Saturday
August, 2026

A News 365Times Venture

ತಮಿಳುನಾಡಿಗೆ ನೀರು, ಒಳಹರಿವು ಕುಸಿತ: ತುಂಬಿದ್ದ ಕಬಿನಿ ಡ್ಯಾಂ ಖಾಲಿ

Date:

ಮೈಸೂರು,ಆಗಸ್ಟ್,29,2026 (www.justkannada.in):  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆಗಾಗಿ ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀರು ಹರಿದುಬಿಟ್ಟ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ 71.9 ಅಡಿಗೆ ಕುಸಿದಿದೆ.

ತಮಿಳುನಾಡಿಗೆ ನೀರು ಹರಿಸಿ ಇದೀಗ ಕಬಿನಿ ಡ್ಯಾಂ ಭರ್ತಿಗಾಗಿ ಹಿಂಗಾರು ಮಳೆ ನಂಬಿಕೊಂಡಿದ್ದ ಸರ್ಕಾರ, ಅಧಿಕಾರಿಗಳಿಗೆ ಮಳೆರಾಯ ಶಾಕ್ ನೀಡಿದ್ದು ಕಬಿನಿ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಕುಸಿತ ಕಂಡಿದೆ.  ಒಳಹರಿವು ಕಡಿಮೆಯಾದರೂ ಸಹ ಅಧಿಕಾರಿಗಳು  ಜಲಾಶಯದಿಂದ 8,200 ಹೊರಹರಿವು ಬಿಟ್ಟಿದ್ದಾರೆ.

ಕಬಿನಿ ಜಲಾಶಯಕ್ಕೆ  ಕಳೆದ ತಿಂಗಳು ಇದೇ ದಿನ 30,000 ಕ್ಯೂಸೆಕ್  ಹೆಚ್ಚು ಒಳಹರಿವಿತ್ತು. ಆದರೆ ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು 4,500 ಕ್ಯೂಸೆಕ್ ಗೆ ಇಳಿದಿದೆ.

ಕಬಿನಿ ಜಲಾಶಯ ನೀರಿನ ಸಂಗ್ರಹದ ವಿವರ ಹೀಗಿದೆ.

ಗರಿಷ್ಠಮಟ್ಟ: 84 ಅಡಿ

ಇಂದಿನ ಮಟ್ಟ: 71.90 ಅಡಿ

ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಸಾಮರ್ಥ್ಯ: 12.62 ಟಿಎಂಸಿ

ಒಳಹರಿವು: 4993ಕ್ಯೂಸೆಕ್

ಹೊರಹರಿವು: 8260 ಕ್ಯೂಸೆಕ್

Key words: Kabini Dam, water, Tamilnadu, empty

The post ತಮಿಳುನಾಡಿಗೆ ನೀರು, ಒಳಹರಿವು ಕುಸಿತ: ತುಂಬಿದ್ದ ಕಬಿನಿ ಡ್ಯಾಂ ಖಾಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆ ಪ್ರಮುಖ ರಸ್ತೆಗೆ ಹೆಗಡೆ ಹೆಸರು: ಡಿ ಕೆ ಶಿವಕುಮಾರ್

  ಬೆಂಗಳೂರು, ಆ. 29 :  “ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ...

ಬಿಜೆಪಿ ಕಚೇರಿ ತನಿಖಾ ಸಂಸ್ಥೆಯಲ್ಲ: ನಾಗೇಂದ್ರ ಎಲ್ಲಾ ಹೋರಾಟಕ್ಕೂ ಸಿದ್ದ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಆಗಸ್ಟ್,29,2026 (www.justkannada.in):  ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿರುವ ವಿಚಾರ...

ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ವಿಧಾನಸೌಧ, ಮೈಸೂರು ಅರಮನೆ..!

ಬೆಂಗಳೂರು,ಆಗಸ್ಟ್,29,2026 (www.justkannada.in): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮಿಗೆ ಮೂರು...

87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK

ಮಂಡ್ಯ,ಆಗಸ್ಟ್,29,2026 (www.justkannada.in): ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಬಿ. ನಾಗೇಂದ್ರ ರಾಜೀನಾಮೆ...