19
September, 2026

A News 365Times Venture

19
Saturday
September, 2026

A News 365Times Venture

ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ- ಶ್ರೀನಿಧಿ ಬೆಂಗಳೂರು

Date:

ಬೆಂಗಳೂರು, ಸೆಪ್ಟಂಬರ್,18,2026 (www.justkannada.in):  ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ. ಒಂದು ಚಿತ್ರವು ಚಿತ್ರಕಥೆಯಿಂದ ಆರಂಭವಾಗಬಹುದು. ಆದರೆ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯು ಕಥೆಗೆ ತನ್ನದೇ ಆದ ಜೀವವನ್ನು ನೀಡುತ್ತದೆ ಎಂದು ಶ್ರೀನಿಧಿ ಬೆಂಗಳೂರು  ನುಡಿದರು.

ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ JAIN (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿದ್ದ ಸೃಜನಶೀಲತೆ ಮತ್ತು ಕಥೆ ಹೇಳುವ ಕಲೆಯನ್ನು ಸಂಭ್ರಮಿಸುವ“Cinemates 4.0”ಕಾರ್ಯಕ್ರಮವದಲ್ಲಿ ಪಾಲ್ಗೊಂಡು ಶ್ರೀನಿಧಿ ಬೆಂಗಳೂರು ಮಾತನಾಡಿದರು.

ಬರಹಗಾರ ಹಾಗೂ ನಿರ್ದೇಶಕ ‘Blink’, ‘Jerax’ ಮತ್ತು ‘Video’ಚಿತ್ರಗಳಿಂದ ಚಿರ ಪರಿಚಿತರಾಗಿದ್ದಾರೆ, ಯುವ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸುತ್ತಾ, “ಒಂದು ಚಿತ್ರವು ಚಿತ್ರಕಥೆಯಿಂದ ಆರಂಭವಾಗಬಹುದು. ಆದರೆ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯು ಕಥೆಗೆ ತನ್ನದೇ ಆದ ಜೀವವನ್ನು ನೀಡುತ್ತದೆ”ಎಂದು ಹೇಳಿದರು.

Cinemates 4.0ನಂತಹ ಸವಾಲುಗಳಲ್ಲಿ ಭಾಗವಹಿಸುವುದರ ಮೂಲಕ ಮಹತ್ವ ಪಡೆದುಕೊಳ್ಳುವುದು  ಒತ್ತಿ ಹೇಳಿದ ಅವರು, “ನಿಜವಾದ ಸಾಧನೆ ಯಾವಾಗಲೂ ಗೆಲ್ಲುವುದರಲ್ಲಿ ಇರುವುದಿಲ್ಲ; ಭಾಗವಹಿಸುವ ಧೈರ್ಯ ಹೊಂದುವುದು ಮತ್ತು ತಮ್ಮ ಕೆಲಸವನ್ನು ಜನರ ಮುಂದೆ ತರುವುದು ಮುಖ್ಯ. ಅದು 48 ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಾಗಿರಲಿ ಅಥವಾ ಒಂದು ಪೂರ್ಣಪ್ರಮಾಣದ ಚಿತ್ರವಾಗಿರಲಿ, ಈ ಪ್ರಕ್ರಿಯೆ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಆದರೂ, ಒಂದು ಚಿತ್ರವನ್ನು ಸೃಷ್ಟಿಸುವುದು ಜಗತ್ತಿನ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ”ಎಂದುತಮ್ಮ ಅಭಿಪ್ರಾಯ ವ್ಯಕ್ತಪಡೆಸಿದರು.

JAIN (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ಶ್ರದ್ಧಾ ಕನ್ವರ್ಅವರು, “48 ಗಂಟೆಗಳ ಕಿರುಚಿತ್ರ ನಿರ್ಮಾಣ ಸವಾಲು ಮಾನವ ಸೃಜನಶೀಲತೆಯ ಸಂಭ್ರಮವಾಗಿದೆ. ಕಲ್ಪನೆ, ಭಾವನೆ ಮತ್ತು ಕಥೆ ಹೇಳುವ ಕಲೆಗಳು ಅಸಾಮಾನ್ಯ ಸವಾಲುಗಳ ನಡುವೆಯೂ ಇಲ್ಲಿ ಒಂದಾಗುತ್ತವೆ”ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಮತ್ತಷ್ಟು ಒತ್ತಿ ಹೇಳುತ್ತಾ, “ತಂತ್ರಜ್ಞಾನವು ಚಲನಚಿತ್ರ ನಿರ್ಮಾಣಕ್ಕೆ ನೆರವಾಗಬಹುದು. ಆದರೆ ಮಾನವನ ಕಲ್ಪನೆಯೇ ಸಿನಿಮಾದ ಹಿಂದಿರುವ ಅತ್ಯಂತ ಶಕ್ತಿಶಾಲಿ ಶಕ್ತಿ”ಎಂದರು.

JAIN (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ  ಡಾ. ಭಾರ್ಗವಿ ಡಿ. ಹೆಮ್ಮಿಗೆ ಮಾತನಾಡಿ,  ಹಾಳಾದ ಮೆಮೊರಿ ಕಾರ್ಡ್‌ಗಳು, ಕಳೆದುಹೋದ ಧ್ವನಿಗಳು, ಅನಿರೀಕ್ಷಿತ ಹಿನ್ನೆಲೆ ಶಬ್ದಗಳು ಮತ್ತು ನಿದ್ರಾಹೀನತೆಯಂತಹ ಹಲವು ಸವಾಲುಗಳನ್ನು ಎದುರಿಸಿದರೂ, ಅವರು ಪ್ರಯತ್ನವನ್ನು ನಿಲ್ಲಿಸಲಿಲ್ಲ. ಆ ದೃಢತೆಯೇ ಸಿನಿಮಾದ ನಿಜವಾದ ಅದ್ಭುತ”ಎಂದು ಹೇಳಿದರು.

ದೇಶದಾದ್ಯಂತ 25ಕ್ಕೂ ಹೆಚ್ಚು ತಂಡಗಳು Cinemates 4.0ರಲ್ಲಿ ಭಾಗವಹಿಸಿದ್ದು, ಅವುಗಳಲ್ಲಿ11 ತಂಡಗಳನ್ನು ತೀರ್ಪುಗಾರರು ಅಂತಿಮ ಹಂತಕ್ಕೆ ಆಯ್ಕೆ ಮಾಡಿದರು.  ಸೆಪ್ಟೆಂಬರ್ 22, 2026ರಂದು“Mise-en-Scène”ಎಂಬ ಅಂತರ-ಕಾಲೇಜು ಕಾರ್ಯಕ್ರಮ ನಡೆಯಲಿದ್ದು, ಭಯಾನಕ, ವೈಜ್ಞಾನಿಕ ಕಾಲ್ಪನಿಕ, ಹಾಸ್ಯ, ಪ್ರೇಮಕಥೆ, ಥ್ರಿಲ್ಲರ್ ಮತ್ತು ಜೀವನಚರಿತ್ರೆ ಸೇರಿದಂತೆ ವಿವಿಧ ವಿಷಯಗಳ ಮೂಲಕ ಭಾರತೀಯ ಸಿನಿಮಾದ ಸೃಜನಶೀಲ ವೈವಿಧ್ಯತೆಯನ್ನು ಅನಾವರಣಗೊಳಿಸಲಿದೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಸ್ತೂರಿ ರಂಗನ್‌ ವರದಿಯ ಆತಂಕಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ,ಸೆಪ್ಟೆಂಬರ್ 19,2026 (www.justkannada.in) ರಾಜ್ಯ ಸರ್ಕಾರ  ಸ್ಪರ್ಷವಾಗಿ ಕಸ್ತೂರಿ ರಂಗನ್ ವರದಿಯನ್ನು...

ಸೆಮಿಕಾನ್ ಇಂಡಿಯಾ-2026 ಸಮಾವೇಶ: ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು ನಿಚ್ಚಳ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್‌,19,2026 (www.justkannada.in): ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ 20ಕ್ಕೂ ಹೆಚ್ಚು...

ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘಕ್ಕೆ ಲಾಭ- ಅಧ್ಯಕ್ಷ ಕೆ.ದೀಪಕ್ ಘೋಷಣೆ.

ಮೈಸೂರು,ಸೆಪ್ಟಂಬರ್‌,19,2026 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘವು 2025-26...

ಪ್ರೊ. ಎಸ್. ರಂಗಪ್ಪ ಅವರಿಗೆ ಕ್ಯೋಟೋ ವಿಶ್ವವಿದ್ಯಾಲಯದಿಂದ ಸಂಶೋಧನಾ ಸಹಯೋಗದ ಆಹ್ವಾನ

ಮೈಸೂರು,ಸೆಪ್ಟಂಬರ್‌,19,2026 (www.justkannada.in) : ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ, NASI Distinguished...