28
September, 2026

A News 365Times Venture

28
Monday
September, 2026

A News 365Times Venture

ಅ.13ರಿಂದ ಯುವ ದಸರಾ: ಪ್ರತಿದಿನ ಹೊಸತನ ಸಂಗೀತದ ರಸದೌತಣಕ್ಕೆ ಸಜ್ಜು

Date:

ಮೈಸೂರು,ಸೆಪ್ಟಂಬರ್,26,2026 (www.justkannada.in): ಯುವ ದಸರಾ 2026 ಕಾರ್ಯಕ್ರಮವು ಪ್ರತಿದಿನ ಹೊಸತನ ಸಂಗೀತದ ರಸದೌತಣ ಎಂಬ ಧೇಯ್ಯವಾಕ್ಯದೊಂದಿಗೆ ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ಒಟ್ಟು ಐದು ದಿನಗಳ ಕಾಲಸಂಜೆ 5:30 ರಿಂದ ರಾತ್ರಿ 10:30 ರವರೆಗೆ ಮೈಸೂರು ರಿಂಗ್ ರೋಡ್ ನ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.

ಅಕ್ಟೋಬರ್ 13 ರಂದು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಖ್ಯಾತ ಕಲಾವಿದರ ಕಾರ್ಯಕ್ರಮಗಳು ಪ್ರತಿದಿನ ರಾತ್ರಿ 7:30 ರಿಂದ 10:30 ರವರೆಗೆ ನಡೆಯಲಿದೆ.

ಅಕ್ಟೋಬರ್ 13 ರಂದು ಹೆಸರಾಂತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಹಾಗೂ ಅವರ ತಂಡದ ಗಾಯಕರಾದ ಆಬಿ.ಬಿ, ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಘ್ನೇಶ್, ಅನನ್ಯಾ ಭಟ್, ಮಂಗಲಿ, ಜಸ್ಕರನ್ ಸಿಂಗ್, ಐಶ್ವರ್ಯ ರಂಗರಾಜನ್, ಗಾಯಕರಾದ ಸಿ.ಆರ್ ಬಾಬಿ,ಹರ್ಷಿಕಾ ದೇವನಾಥ್, ಅನಿರುದ್ದ ಶಾಸ್ತಿç, ಇಂದು ನಾಗರಾಜ್,ಶೇ಼ಷಾಂಕ್ ಶೇಷರಿಗಿ ಇವರುಗಳಿಂದ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 14 ರಂದು ಭಾರತದ ಹೆಸರಾಂತ ಸಂಗೀತ ನಿರ್ದೇಶಕರು ಮತ್ತು ಗಾಯಕರಾದ ಶಂಕರ್-ಎಹಸಾನ್-ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 15 ರಂದು ಸುಪ್ರಸಿದ್ದ ಬಹುಭಾಷ ಗಾಯಕರಾದ ಸಿಡ್ ಶ್ರೀರಾಮ್ ಇವರಿಂದ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 16 ರಂದು ಸ್ಯಾಂಡಲ್ವುಡ್ ನೈಟ್ಸ್ ವತಿಯಿಂದ ಶಿವರಾಜ್ ಕುಮಾರ್, ರಚಿತಾ ರಾಮ್, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, All ok,ಅನುರಾಧಾ ಭಟ್, ಮತ್ತು ಹೆಸರಾಂತ ಗಾಯಕರುಗಳಿಂದ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 17 ರಂದು ಭಾರತದ ಪ್ರಖ್ಯಾತ ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ಹಾಗೂ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿದೆ.

ಪ್ರತಿದಿನ ಸಂಜೆ 5:30 ರಿಂದ ರಾತ್ರಿ 7:30 ರವರೆಗೆ ಸ್ಥಳೀಯ ಹಾಗೂ ವಿವಿಧ ಭಾಗಗಳ ಆಯ್ಕೆ ಕಲಾವಿದರಿಂದ ಫಿಲ್ಲರ್ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೊಲೆ ಮತ್ತು ಸಂಚು ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

  ಬೆಂಗಳೂರು, ಸೆ.28, 2026: ಬೆಂಗಳೂರಿನಲ್ಲಿ ನಡೆದ ಸಂಚಲನ ಮೂಡಿಸಿದ್ದ ಕೊಲೆ ಹಾಗೂ...

JUSTKANNADA EXCLUSIVE; POCSO ಪ್ರಕರಣ,  ಆರೋಪಿಗೆ 25 ವರ್ಷ ಕಠಿಣ ಜೈಲು.

  ಮೈಸೂರು, SEP.28,2026: POCSO ಪ್ರಕರಣದಲ್ಲಿ ನಂಜನಗೂಡಿನ 40 ವರ್ಷದ ವ್ಯಕ್ತಿಗೆ 25...

ಖುದ್ದು ಹಾಜರಾಗುವಂತೆ ಸಚಿವ ಲಕ್ಷ್ಮಣ್ ಸವದಿಗೆ ಕೋರ್ಟ್ ಸಮನ್ಸ್

ಬೆಳಗಾವಿ,ಸೆಪ್ಟಂಬರ್,28,2026 (www.justkannada.in): 2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9...

ಮೈಸೂರು ದಸರಾ ಉದ್ಘಾಟನೆಗೆ ಅ. 3ರಂದು ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನ

ಮೈಸೂರು ಸೆಪ್ಟಂಬರ್,28,2026 (www.justkannda.in):  ವಿಶ್ವವಿಖ್ಯಾತ ಮೈಸೂರು ದಸರಾ 2026ರ ಕಾರ್ಯಕ್ರಮದ ಉದ್ಘಾಟನೆಗೆ...