29
September, 2026

A News 365Times Venture

29
Tuesday
September, 2026

A News 365Times Venture

ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

Date:

ಮೈಸೂರು, ಸೆಪ್ಟಂಬರ್,29, 2026 (www.justkannada.in): ದಸರಾ ವಸ್ತುಪ್ರದರ್ಶನದ ಆವರಣದಲ್ಲಿದ್ದ ವರನಟ ಡಾ.ರಾಜ್‌ ಕುಮಾರ್ ಅವರ ಪುತ್ಥಳಿ ಸ್ಥಳಾಂತರ ವಿವಾದಕ್ಕೆ ಇದೀಗ ತೆರೆ ಬೀಳುವ ಹಂತ ತಲುಪಿದೆ. ಮೂಲಸ್ಥಳದಲ್ಲೇ ಡಾ.ರಾಜ್‌ ಕುಮಾರ್ ಪುತ್ಥಳಿಯನ್ನು ಪುನರ್ ಸ್ಥಾಪಿಸಲು ನಿರ್ಧರಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಮೂಲಸ್ಥಳದಿಂದ ಪುತ್ಥಳಿಯನ್ನು ಸ್ಥಳಾಂತರಿಸಲಾಗಿತ್ತು. ಇದಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಿಂದಿನ ಸ್ಥಳದಲ್ಲೇ ಪುತ್ಥಳಿಯನ್ನು ಮರುಸ್ಥಾಪಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವರ ನೇತೃತ್ವದಲ್ಲಿ ಮೈಸೂರು ಪ್ರಾಧಿಕಾರ, ಕನ್ನಡಪರ ಸಂಘಟನೆಗಳು ಹಾಗೂ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘಟನೆಗಳೊಂದಿಗೆ ಸುದೀರ್ಘ ಸಭೆ ನಡೆಯಿತು.

ಸಭೆಯಲ್ಲಿ ಹಿಂದೆ ಇದ್ದ ಸ್ಥಳದಲ್ಲೇ ಡಾ.ರಾಜ್‌ಕುಮಾರ್ ಪುತ್ಥಳಿಯನ್ನು ಪುನರ್ ಸ್ಥಾಪಿಸಲು ಸಮ್ಮತಿ ವ್ಯಕ್ತವಾಗಿದೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಮುಂದುವರಿದಿದ್ದ ಪುತ್ಥಳಿ ಸ್ಥಳಾಂತರದ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.

ಎಂಎಲ್‌ಸಿ ರಘು ಆಕ್ಷೇಪ

ಪುತ್ಥಳಿ ಸ್ಥಳಾಂತರಕ್ಕೆ ಬಿಜೆಪಿ ಎಂಎಲ್‌ಸಿ ರಘು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೂಲಸ್ಥಳದಲ್ಲೇ ಪುತ್ಥಳಿಯನ್ನು ಪುನರ್ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಇದೇ ವಿಚಾರವಾಗಿ ಕನ್ನಡಪರ ಸಂಘಟನೆಗಳು ಸೆ.30ರೊಳಗೆ ಕ್ರಮ ಕೈಗೊಳ್ಳುವಂತೆ ಸಮಯವಕಾಶ ನೀಡಿದ್ದವು.

ಅಭಿಮಾನಿಗಳ ಅಭಿಪ್ರಾಯಕ್ಕೆ ಮನ್ನಣೆ

ಪುತ್ಥಳಿ ಸ್ಥಳಾಂತರದ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಪ್ರಾಧಿಕಾರ ಅಧ್ಯಕ್ಷ ಆಯೂಬ್ ಖಾನ್, ಡಾ.ರಾಜ್‌ಕುಮಾರ್ ಅಭಿಮಾನಿಗಳು ಇಚ್ಛಿಸಿದಲ್ಲಿ ಪುತ್ಥಳಿಯನ್ನು ಸ್ಥಳಾಂತರಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಸಚಿವ ಡಾ.ಯತೀಂದ್ರ ನೇತೃತ್ವದ ಸಭೆಯ ಬಳಿಕ ಮೂಲಸ್ಥಳದಲ್ಲೇ ಪುತ್ಥಳಿ ಪುನರ್ ಸ್ಥಾಪನೆಗೆ ಸಮ್ಮತಿ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಡಾ.ರಾಜ್‌ಕುಮಾರ್ ಅವರ ಪುತ್ಥಳಿ ಮತ್ತೆ ಮೂಲಸ್ಥಳದಲ್ಲೇ ಪ್ರತಿಷ್ಠಾಪನೆಯಾಗಲಿರುವುದರಿಂದ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಪ್ರಮುಖ ಬೇಡಿಕೆಗೆ ಮನ್ನಣೆ ದೊರೆತಂತಾಗಿದೆ.

Key words: Dr. Raj’s statue, original site, meeting, Minister Dr. Yathindra Siddaramaiah.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ...

ಖಾಸಗಿ ಬಸ್ ಹರಿದು ಒಂದುವರೆ ವರ್ಷದ ಮಗು ಸಾವು

ಮೈಸೂರು,ಸೆಪ್ಟಂಬರ್,29,2026 (www.justkannada.in): ರಸ್ತೆ ಬದಿ ನಿಂತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ...

ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ...

ದಸರಾ ಕಂಬಳ ಕ್ರೀಡಾಕೂಟದ ಆನ್ಲೈನ್ ನೋಂದಣಿ ಆರಂಭ

ಮೈಸೂರು, ಸೆಪ್ಟಂಬರ್,28,2026 (www.justkannada.in): ಮೈಸೂರು ದಸರಾ 2026ರ ಸಾಂಸ್ಕೃತಿಕ ಹಾಗೂ ಕ್ರೀಡಾ...