29
September, 2026

A News 365Times Venture

29
Tuesday
September, 2026

A News 365Times Venture

ಅ.5ರೊಳಗೆ ಯುಜಿ ಕೇಬಲ್ ಕಾಮಗಾರಿ ಪೂರ್ಣಗೊಳಿಸಿ- ರಮೇಶ್ ಬಂಡಿಸಿದ್ದೇಗೌಡ ಕಟ್ಟುನಿಟ್ಟಿನ ಸೂಚನೆ

Date:

ಮೈಸೂರು, ಸೆಪ್ಟಂಬರ್,29, 2026 (www.justkannada.in):  ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್ ಕೇಬಲ್ (ಯುಜಿ ಕೇಬಲ್) ಅಳವಡಿಕೆ ಕಾಮಗಾರಿಯನ್ನು ಅ.5ರೊಳಗೆ ಪೂರ್ಣಗೊಳಿಸುವಂತೆ ಶಾಸಕರೂ ಆಗಿರುವ ಸೆಸ್ಕ್ ಅಧ್ಯಕ್ಷ  ರಮೇಶ್ ಬಂಡಿಸಿದ್ದೇಗೌಡ ಅವರು ಸಂಬಂಧಪಟ್ಟ ಏಜೆನ್ಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕಚೇರಿಯಲ್ಲಿ ಮಂಗಳವಾರ ಯುಜಿ ಕೇಬಲ್ ಕಾಮಗಾರಿಯ ಪ್ರಗತಿ ಕುರಿತು ಸಂಬಂಧಪಟ್ಟ ಏಜೆನ್ಸಿಗಳು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನಗರದಲ್ಲಿ ನಡೆಯುತ್ತಿರುವ ಯುಜಿ ಕೇಬಲ್ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವ ಜತೆಗೆ, ಕಾಮಗಾರಿ ನಡೆದಿರುವ ಸ್ಥಳಗಳ ಪುನಶ್ಚೇತನ ಕಾರ್ಯವನ್ನು ಶೇ.100ರಷ್ಟು  ಪೂರ್ಣಗೊಳಿಸಬೇಕು. ಅಕ್ಟೋಬರ್ 5ರೊಳಗೆ ಪುನಶ್ಚೇತನ ಕಾಮಗಾರಿಗಳನ್ನು ಮುಗಿಸಬೇಕು. ದಸರಾ ಹಿನ್ನೆಲೆಯಲ್ಲಿ ಹೊಸದಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸೂಚಿಸಿದರು. ಕಾಮಗಾರಿ ಮುಗಿಸುವ ವಿಚಾರದಲ್ಲಿ ರಾಜಿಗೆ ಅವಕಾಶವಿಲ್ಲ. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು.

ಗುಂಡಿ ತೆಗೆದು ಹಾಗೇ ಬಿಡಬೇಡಿ :

“ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಾಗಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಗುಂಡಿಗಳನ್ನು ತೆಗೆದು ಹಾಗೆಯೇ ಬಿಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಬಂಡಿಸಿದ್ದೇಗೌಡ ಅವರು, ಈಗಾಗಲೇ ಗುಂಡಿ ತೆಗೆದು ಮುಚ್ಚದೆ ಬಿಟ್ಟಿರುವ ಎಲ್ಲ ಸ್ಥಳಗಳನ್ನು ಗುರುತಿಸಿ ತಕ್ಷಣ ಸಮರ್ಪಕವಾಗಿ ಮುಚ್ಚಬೇಕು. ಗುಂಡಿಗಳನ್ನು ಮುಚ್ಚಿದ ಬಳಿಕ ಕಾಮಗಾರಿಯಿಂದ ಉಂಟಾಗಿರುವ ಡೆಬ್ರಿಸ್‌ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಬ್ಯಾರಿಕೇಡ್‌ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮನ್ವಯದಿಂದ ಕಾಮಗಾರಿ ನಡೆಸಿ :

ನಗರದಲ್ಲಿ ವೈಟ್ ಟ್ಯಾಪಿಂಗ್, ಯುಜಿಡಿ ಹಾಗೂ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳ ನಡುವೆ ಸಮನ್ವಯದ ಕೊರತೆಯಾದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾಮಗಾರಿ ನಡೆಸಬೇಕು” ಎಂದು ಹೇಳಿದರು.

ಮೆಟೀರಿಯಲ್ಸ್ ತೆರವುಗೊಳಿಸಿ :

ದಸರಾ ಸಂದರ್ಭದಲ್ಲಿ ನಗರದ ಪಾದಚಾರಿ ಮಾರ್ಗಗಳು ಸೇರಿದಂತೆ ವಿವಿಧೆಡೆ ಇರಿಸಿರುವ ಯುಜಿ ಕೇಬಲ್ ಹಾಗೂ ಸೆಸ್ಕ್ ಗೆ ಸಂಬಂಧಿಸಿದ ಎಲ್ಲ ಮೆಟೀರಿಯಲ್‌ ಗಳನ್ನು ಕೂಡಲೇ ತೆರವುಗೊಳಿಸಬೇಕು. ನಗರದ ಸೌಂದರ್ಯ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು” ಎಂದರು.

ಅ.6ರಂದು ಮತ್ತೊಂದು ಸಭೆ :

ಯುಜಿ ಕೇಬಲ್ ಕಾಮಗಾರಿಗೆ ಸಂಬಂಧಿಸಿದಂತೆ ಅ.6ರಂದು ಮತ್ತೊಮ್ಮೆ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಈ ಸಭೆಗೆ ಪ್ರತಿಯೊಂದು ಏಜೆನ್ಸಿಗಳ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಸದರಿ ಸಭೆಯ ವೇಳೆಗೆ ಕಾಮಗಾರಿಗಳು ಮುಗಿಯದಿದ್ದರೆ ಮುಂದಿನ ಕ್ರಮವಹಿಸುವುದಾಗಿ ಎಚ್ಚರಿಸಿದರು.

ಸಭೆಯಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಸೇರಿದಂತೆ ಸೆಸ್ಕ್ ಹಾಗೂ ವಿವಿಧ ಏಜೆನ್ಸಿಗಳ ಅಧಿಕಾರಿಗಳು ಇದ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉಪ್ಪು ಸೇವನೆ ಕುರಿತು ಮಾರ್ಗಸೂಚಿ: ನಿಯಮ ಪಾಲಿಸಲು ಸಚಿವ ಯು.ಟಿ ಖಾದರ್ ಮನವಿ

ಬೆಂಗಳೂರು, ಸೆಪ್ಟಂಬರ್, 29,2026 (www.justkannada.in): ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ...

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ...

ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

ಮೈಸೂರು, ಸೆಪ್ಟಂಬರ್,29, 2026 (www.justkannada.in): ದಸರಾ ವಸ್ತುಪ್ರದರ್ಶನದ ಆವರಣದಲ್ಲಿದ್ದ ವರನಟ ಡಾ.ರಾಜ್‌...

ಖಾಸಗಿ ಬಸ್ ಹರಿದು ಒಂದುವರೆ ವರ್ಷದ ಮಗು ಸಾವು

ಮೈಸೂರು,ಸೆಪ್ಟಂಬರ್,29,2026 (www.justkannada.in): ರಸ್ತೆ ಬದಿ ನಿಂತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ...