5
October, 2026

A News 365Times Venture

5
Monday
October, 2026

A News 365Times Venture

ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರ್ಪಡೆ ತಡೆಗೆ ಆಗ್ರಹ: ಬೃಹತ್ ಪ್ರತಿಭಟನೆ

Date:

ಮೈಸೂರು,ಅಕ್ಟೋಬರ್,5,2026 (www.justkannada.in): ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ (ಪೊಲೀಸ್ ಬಡಾವಣೆ) ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ, ಐತಿಹಾಸಿಕ ತಿಪ್ಪಯ್ಯನ ಕೆರೆಗೆ ಕಲುಷಿತ ಒಳಚರಂಡಿ ನೀರು ಸೇರುವುದನ್ನು ತಡೆದು ಕೆರೆಯನ್ನು ಸಂರಕ್ಷಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.

ಬಡಾವಣೆಯ ಮುಖ್ಯ ದ್ವಾರದ ಬಳಿ ಪ್ರತಿಭಟನೆಗೆ ಕುಳಿತ ನೂರಾರು ಮಂದಿ ನಿವಾಸಿಗಳು ರಸ್ತೆ ತಡೆ ಮಾಡಿ ವಾಹನ ಸಂಚಾರ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲ ನಿಮಿಷಗಳ ಕಾಲ ಆ ಮಾರ್ಗದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಕರ್ನಾಟಕ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ನಿರ್ಮಾಣಗೊಂಡಿರುವ ಈ ಬಡಾವಣೆ ಈವರೆಗೆ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು ಹಾಗೂ ತಿಪ್ಪಯ್ಯನ ಕೆರೆಯ ಮಾಲಿನ್ಯ ತೀವ್ರ ಸಮಸ್ಯೆಗಳಾಗಿವೆ. ಕೊಳವೆಬಾವಿ ಮೂಲಕ ಸರಬರಾಜಾಗುತ್ತಿರುವ ನೀರು ಅತ್ಯಂತ ಕ್ಷಾರಯುಕ್ತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ಪರಿಸರ ಹಾಗೂ ಸೌಂದರ್ಯ ಹದಗೆಟ್ಟಿದ್ದು, ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಶಿವಸ್ವಾಮಿ, ಅಶೋಕ್, ಮನುಕುಮಾರ್, ಮೋಹನ್ ರಾವ್, ಲೋಹಿತ್, ಮಹೇಶ್, ಸ್ವಾಮಿ, ಶಿವರಾಮ್, ಗಗನ್, ಲೀಲಾ ಶಿವಕುಮಾರ್,  ಶೋಭಾ ಧನಂಜಯ, ಮೋಹನ್ ಕುಮಾರ್, ಸಿದ್ದರಾಜೇಗೌಡ, ವೀಣಾ ಕಾಮತ್, ವೆಂಕಟೇಶ್, ಶಿವಣ್ಣ, ಎನ್.ಎಂ. ಮಾನೆ, ದೇವಪ್ಪ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Key words: Demand, stop adding, polluted water, Thippaya Lake, protest, Mysore

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸುಳ್ಳು ಫಾರ್ಮ್ 7 ನೀಡಿದ್ರೆ ಒಂದು ವರ್ಷ ಜೈಲು- ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾರ್ನಿಂಗ್

ಬೆಂಗಳೂರು,ಅಕ್ಟೋಬರ್,5,2026 (www.justkannada.in):  ಫಾರ್ಮ್ 7 ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ...

 ಮೈಸೂರು ಅರಮನೆಗೆ ಎಂಟ್ರಿಕೊಟ್ಟ ಅಭಿಮನ್ಯು: ವಿಶೇಷ ಪೂಜೆ ಸಲ್ಲಿಕೆ

ಮೈಸೂರು,ಅಕ್ಟೋಬರ್,5,2026 (www.justkannada.in): ಕಳೆದ 6 ವರ್ಷಗಳ ಕಾಲ ವಿಶ್ವವಿಖ್ಯಾತ ಮೈಸೂರು ದಸರಾ...

ಪ್ರಭುತ್ವಕ್ಕೆ ಪ್ರಶ್ನೆಗಳ ಭಯ; ಗಾಂಧೀಜಿಯನ್ನು ಇತಿಹಾಸದಿಂದಲೇ ಅಳಿಸುವ ಪ್ರಯತ್ನ ನಡೆಯುತ್ತಿದೆ .!

ಪ್ರಶ್ನೆ ಕೇಳಿದರೆ ಎಂತಹ ಗದ್ದುಗೆಯಾದರೂ ಅಲುಗಾಡುತ್ತದೆ: ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಪ್ರಭುತ್ವಕ್ಕೆ ಪ್ರಶ್ನೆಗಳ...

ಚಾಮುಂಡಿ ಬೆಟ್ಟ :  ವಾಹನ ದಟ್ಟಣೆಗೆ ಕಡಿವಾಣ! ಬೆಟ್ಟದ ಕೆಳಗೇ ಪಾರ್ಕಿಂಗ್ ವ್ಯವಸ್ಥೆ,  ವಿಐಪಿ ಸಂಸ್ಕೃತಿಗೂ ಕಡಿವಾಣ ಚಿಂತನೆ

  ಹುಂಡಿ ಹಣದ ಮಾಸಿಕ ಎಣಿಕೆಗೆ ಸೂಚನೆ; ಗೆಸ್ಟ್‌ಹೌಸ್ ನಿರ್ವಹಣೆ ಕೆಎಸ್‌ಟಿಡಿಸಿಗೆ ವಹಿಸಲು...