5
October, 2026

A News 365Times Venture

5
Monday
October, 2026

A News 365Times Venture

ಧರ್ಮ ಮತ್ತು ಜಾತಿ ಈ ದೇಶದ ದುರಂತ: ಕಫೀಲ್ ಖಾನ್

Date:

 

Bangalore, oct.05,2026: ಧರ್ಮ ಮತ್ತು ಜಾತಿ ಈ ದೇಶವನ್ನು ನುಂಗಿಹಾಕುತ್ತಿದೆ ಎಂದು ಡಾ. ಕಫೀಲ್ ಖಾನ್ ವಿಷಾದಿಸಿದರು.

ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ಡಾ. ಕಫೀಲ್ ಖಾನ್ ಅವರ ‘ಗೋರಖಪುರ ಆಸ್ಪತ್ರೆ ದುರಂತ ‘ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಈ ದೇಶದಲ್ಲಿ ಕಾಪಾಡುವ ಕೈಗಳು ಶಿಕ್ಷೆಗೆ ಒಳಗಾಗಬೇಕಾದ, ಇನ್ನಿಲ್ಲದ ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾದ ಕರಾಳ ವಾತಾವರಣವಿದೆ. ಇವತ್ತಿನ ವ್ಯವಸ್ಥೆಗೆ ಮಾಧ್ಯಮಗಳೂ ಸಹಾ ಕೈಜೋಡಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ. ಮಕ್ಕಳನ್ನು ಬದುಕಿಸಿದ ಧೀರ ಎನ್ನುವ ಪ್ರಶಂಸೆ ಮಾಡಿದ ಮಾಧ್ಯಮಗಳೇ ಮಕ್ಕಳನ್ನು ಕೊಂದ ಖಳನಾಯಕ ಎನ್ನುವ ಹಣೆಪಟ್ಟಿ ಅಂಟಿಸಿದವು. ನನ್ನ ಮುಂದೆ ಇದ್ದದ್ದು ಮಕ್ಕಳನ್ನು ಉಳಿಸುವ ಗುರಿಯಷ್ಟೇ. ಆದರೆ ನಾನು 308 ಮಕ್ಕಳನ್ನು ಕೊಂದೆ ಎನ್ನುವ ಆರೋಪ ಹೊರಿಸಿ 9 ತಿಂಗಳುಗಳ ಕಾಲ ಜೈಲಿಗೆ ತಳ್ಳಿದವು ಎಂದು ನೊಂದು ನುಡಿದರು.

ಕೃತಿಯನ್ನು ಅನುವಾದಿಸಿದ ಹಿರಿಯ ಪತ್ರಕರ್ತ ಬಿ. ಎಂ. ಹನೀಫ್ ಅವರು ಮಾತನಾಡಿ ಈ ಕೃತಿ ಮನಸ್ಸನ್ನು ಕಲಕುತ್ತದೆ. ಈ ಕೃತಿಯನ್ನು ಅನುವಾದಿಸುತ್ತಾ ನಾನು ಅತ್ತಿದ್ದೇನೆ ಎಂದು ವಿವರಿಸಿದರು. ಕಫೀಲ್ ಖಾನ್ ಅವರು ವ್ಯವಸ್ಥೆಯ ಕರಾಳತೆಯ ವಿರುದ್ಧ ನಡೆಸಿದ ಹೋರಾಟ ಎಲ್ಲರಿಗೂ ಸ್ಫೂರ್ತಿದಾಯಕ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಹುರೂಪಿಯ ಜಿ ಎನ್ ಮೋಹನ್ ಅವರು ಕಫೀಲ್ ಖಾನ್ ಪ್ರಕರಣ ಇಡೀ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಇವತ್ತಿನ ಜೆನ್ ಜೀ ಹೋರಾಟಕ್ಕೆ ಕಫೀಲ್ ಖಾನ್ ಅವರು ನಡೆಸಿದ ದೃಢ ಹೋರಾಟವೂ ಸಾಕಷ್ಟು ಶಕ್ತಿ ನೀಡಿದೆ ಎಂದರು.

ಹಿರಿಯ ಲೇಖಕಿ, ಸಾಮಾಜಿಕ ಚಿಂತಕಿ ಡಾ. ವಿಜಯಾ ಹಾಗೂ ಬಹುರೂಪಿ ಸಂಸ್ಥಾಪಕಿ ಶ್ರೀಜಾ ವಿ. ಎನ್ ಅವರು ಉಪಸ್ಥಿತರಿದ್ದರು.

KEY WORDS:

Dr Kafeel Khan, Gorakhpur Hospital Tragedy, Gorakhpur hospital incident, Kafeel Khan book launch, Bahuroopi Prakashana, Religion and caste in India, Bengaluru news, Kafeel Khan speech

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

MYSORE PALACE: ನಟಿ ಕಾಜಲ್ ಅಗರ್ವಾಲ್ ಭೇಟಿ; ಅರಮನೆ ವೈಭವಕ್ಕೆ ಮನಸೋತ ನಟಿ

  ಮೈಸೂರು, ಅ.5: ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಕಾಜಲ್ ಅಗರ್ವಾಲ್ ಮೈಸೂರಿನ...

ಫಾರ್ಮ್​-7 ದುರ್ಬಳಕೆ: ಸ್ಪಷ್ಟನೆ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ಬೆಂಗಳೂರು, ಅಕ್ಟೋಬರ್,​​ 5,2026 (www.justkannada.in):  ರಾಜ್ಯದಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ...

ಸಿಎಂ ಮೊನ್ನೆ ಡ್ರಾಮಾ ಮಾಡಿ ಚು.ಆಯೋಗದ ಮೇಲೆ  ಒತ್ತಡ ಹಾಕಿದ್ದಾರೆ- ಕೇಂದ್ರ ಸಚಿವ HDK

ಬೆಂಗಳೂರು, ಅಕ್ಟೋಬರ್,5,2026 (www.justkannada.in):  ಸಿಎಂ ಮೊನ್ನೆ ಡ್ರಾಮಾ ಮಾಡಿದ್ದಾರೆ. ಚುನಾವಣಾ ಆಯೋಗದ...

ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ರೂ.183.78 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ- ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್,5,2026 (www.justkannada.in): ವರುಣ ಕ್ಷೇತ್ರದಲ್ಲಿ ಒಟ್ಟು  ರೂ.183.78 ಕೋಟಿ ವೆಚ್ಚದ...