4
May, 2026

A News 365Times Venture

4
Monday
May, 2026

A News 365Times Venture

ರೈತರೇ ಗಮನಿಸಿ: ವಿವಿಧ ಬೆಳೆಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿ

Date:

ಬೆಂಗಳೂರು ಗ್ರಾಮಾಂತರ ಮೇ 26,2025 (www.justkannada.in):  2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಧಿವೃದ್ದಿ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೆಲಮಂಗಲ ತಾಲ್ಲೂಕಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ವತಿಯಿಂದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM) ಹಾಗೂ ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯಡಿ(CHD) ರೈತರು ಬಾಳೆ, ಮಾವು, ಪಪ್ಪಾಯ ಹೈಬ್ರಿಡ್ ತರಕಾರಿ ಮತ್ತು ಹೂವಿನ ಬೆಳೆ ಬೆಳೆಯಬಹುದು. ಹಾಗೇ ರೋಗ ಮತ್ತು ಕೀಟ ನಿಯಂತ್ರಣ, ಪ್ಲಾಸ್ಟಿಕ್ ಹೊದಿಕೆ, ಪ್ರಾಥಮಿಕ ಸಂಸ್ಕರಣ ಘಟಕಗಳು, ಸಂರಕ್ಷಿತ ಬೇಸಾಯ, ವೈಯಕ್ತಿಕ ಕೃಷಿಹೊಂಡ, ಫಾರಂ ಗೇಟ್ ಪ್ಯಾಕ್ ಹೌಸ್ ನಿರ್ಮಾಣ, ಜೇನುಸಾಕಾಣಿಕೆ, ಮೊಬೈಲ್ ವೆಂಡಿಂಗ್ ಕಾರ್ಟ್ ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ಕಾರ್ಯಕ್ರಮದಡಿ ದಾಳಿಂಬೆ, ಡ್ರ್ಯಾಗನ್ ಪ್ರೂಟ್ ಗಳಿಗೆ ಫಲಾನುಭವಿಗಳು  ತೋಟಗಾರಿಕೆ ಇಲಾಖೆಯಿಂದ  ಸಹಾಯಧನವನ್ನು ಪಡೆಯಬಹುದಾಗಿದೆ.

ಅರ್ಜಿಯನ್ನು ಮೇ 31ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ, ಕಸಬಾ ಹೋಬಳಿ, ದೂರವಾಣಿ ಸಂಖ್ಯೆ: 7337866626. ಸಹಾಯಕ ತೋಟಗಾರಿಕೆ ಅಧಿಕಾರಿ, ಸೋಂಪುರ ಹೋಬಳಿ, ದೂರವಾಣಿ ಸಂಖ್ಯೆ: 8884829971. ಸಹಾಯಕ ತೋಟಗಾರಿಕೆ ಅಧಿಕಾರಿ, ತ್ಯಾಮಗೊಂಡ್ಲು ಹೋಬಳಿ, ದೂರವಾಣಿ ಸಂಖ್ಯೆ: 8197655732.  ಸಹಾಯಕ ತೋಟಗಾರಿಕೆ ನಿರ್ದೇಶಕರು ನೆಲಮಂಗಲ, ದೂರವಾಣಿ ಸಂಖ್ಯೆ: 9902581832. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನೆಲಮಂಗಲ, ದೂರವಾಣಿ ಸಂಖ್ಯೆ: 9880461607 ಸಂಪರ್ಕಿಸುವುದು ಎಂದು ನೆಲಮಂಗಲ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Farmers, Apply, incentives, various, crops

The post ರೈತರೇ ಗಮನಿಸಿ: ವಿವಿಧ ಬೆಳೆಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...

ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...

ಮೂರು ರಾಜ್ಯಗಳಲ್ಲಿ ಬಿಜೆಪಿ ಕಮಾಲ್: ಪ.ಬಂಗಾಳದಲ್ಲಿ ದೀದಿಯ ಟಿಎಂಸಿಗೆ ಹಿನ್ನಡೆ

ಕೋಲ್ಕತ್ತಾ,ಮೇ,4,2026 (www.justkannada.in): ಇಂದು  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಐದು ರಾಜ್ಯಗಳಲ್ಲಿಯೂ...

ಮೈಸೂರಿನ ಹೃದಯ ಭಾಗದಲ್ಲಿಯೇ ವಾಲಾಡುತ್ತಿದೆ ತೂಗುಗತ್ತಿ!

  ಮೈಸೂರು, ಮೇ.೦೩,೨೦೨೬: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು 7 ಮಂದಿ...