3
May, 2026

A News 365Times Venture

3
Sunday
May, 2026

A News 365Times Venture

ಮಿಮ್ಸ್ ಗೆ ಭೇಟಿ: ರೋಗಿಗಳ ಬಳಿ ಹೋಗಿ ಆರೋಗ್ಯ ವಿಚಾರಿಸಿದ ಉಪಲೋಕಾಯುಕ್ತರು

Date:

 

ಮಂಡ್ಯ,ಮೇ,27,2025 (www.justkannada.in): ಮಿಮ್ಸ್ ನ ಕೀಲು‌ ಮತ್ತು ಮೂಳೆ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು, ಪುರುಷರು ಹಾಗೂ ಮಕ್ಕಳ ವಾಡ್೯ ಗಳಿಗೆ ಇಂದು ಭೇಟಿ ನೀಡಿದ ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ  ರೋಗಿಗಳ ಬಳಿ ಹೋಗಿ ಆರೋಗ್ಯ ವಿಚಾರಿಸಿದರು.

ಮಿಮ್ಸ್ ನಲ್ಲಿ ನೀಡಲಾಗುತ್ತಿರುವ ಸೇವೆ ಔಷಧೋಪಚಾರ, ಕುಡಿಯುವ ನೀರು ಶೌಚಾಲಯದ ಸ್ವಚ್ಛತೆ, ಹೊರ ರೋಗಿಗಳಿಗೆ ಇರುವ ತೊಂದರೆಗಳು ಕುರಿತಂತೆ ಮಿಮ್ಸ್ ನಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಔಷಧಿ‌ವಿತರಣಾ ಕೇಂದ್ರ, ಪಾರ್ಕಿಂಗ್ ಅಂಬೂಲೆನ್ಸ್ ಸೇವೆ ಕುರಿತು ಪರಿಶೀಲಿಸಿದ‌ ನಂತರ ಸ್ಥಳದಲ್ಲೇ‌ ಪಾರ್ಕಿಂಗ್ ಗಾಗಿ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಹಾಗೂ ಔಷಧಿಗಳನ್ನು ಹೊರಗಡೆ ಮೆಡಿಕಲ್ ಸ್ಟೋರ್ ಗಳಿಗೆ ಬರೆದು ಕೊಡುತ್ತಿದ್ದಾರ ಎಂದು ರೋಗಿಗಳ ಬಳಿ‌ ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿರುವ ಕ್ಯಾಂಟೀನ್ ನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕುರಿತು ಪರಿಶೀಲಿಸಿದ ಲೋಕಾಯುಕ್ತರು ಪ್ರತಿ ಆಹಾರ ಪದಾರ್ಥ ಮಾರಾಟ ಕುರಿತು ಬೆಲೆಯ ವಿವರ ಅನಾವರಣ ಮಾಡಬೇಕು ಎಂದರು.

ಸ್ಥಳದಲ್ಲೇ ಆಹಾರ ಸುರಕ್ಷಾ ಅಧಿಕಾರಿಗಳಿಗೆ ಕರೆ ಮಾಡಿ ಕ್ಯಾಂಟೀನ್ ನಲ್ಲಿ ಮಾರಾಟ ಮಾಡುತ್ತಿರುವ ವಸ್ತುಗಳ ಬಗ್ಗೆ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.

Key words: Visit, MIMS, lokayukta

The post ಮಿಮ್ಸ್ ಗೆ ಭೇಟಿ: ರೋಗಿಗಳ ಬಳಿ ಹೋಗಿ ಆರೋಗ್ಯ ವಿಚಾರಿಸಿದ ಉಪಲೋಕಾಯುಕ್ತರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ – ಸಚಿವ ಸಂತೋಷ್ ಲಾಡ್ ಆಕ್ರೋಶ

ಬೆಂಗಳೂರು, ಮೇ. 2,2026 (www.justkannada.in): ದೊಡ್ಡಬಳ್ಳಾಪುರದ ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುವ...

ಸಿಎಂ ಬದಲಾವಣೆ ಚರ್ಚಿಸುವ ಅವಶ್ಯಕತೆ ಇಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,2,2026 (www.justkannada.in): ಸಿಎಂ ಬದಲಾವಣೆ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ ಎಂದು...

ವಿದ್ಯುತ್‌ ವ್ಯತ್ಯಯ ದೂರಿಗೆ ವಾಟ್ಸ್‌ ಆಪ್‌, ಸಾಮಾಜಿಕ ಜಾಲತಾಣ ಬಳಸಿ: ಬೆಸ್ಕಾಂ ಮನವಿ

ಬೆಂಗಳೂರು,ಮೇ,2,2026 (www.justkannada.in): ವಿದ್ಯುತ್‌ ಸಂಬಂಧಿತ ದೂರುಗಳನ್ನು ದಾಖಲಿಸಲು ವಾಟ್ಸಪ್‌ ಸಹಾಯವಾಣಿ ಸಂಖ್ಯೆಗಳು...

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಬಗೆಹರಿದ ಬಳಿಕ ಗ್ಯಾಸ್ ಸಿಲಿಂಡರ್ ದರ ಇಳಿಕೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಾವಣಗೆರೆ,ಮೇ,2,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ, ಹೋರ್ಮಜ್ ಜಲಸಂಧಿ ಬಿಕ್ಕಟ್ಟಿನಿಂದ ಗ್ಯಾಸ್ ಸಿಲಿಂಡರ್...