3
May, 2026

A News 365Times Venture

3
Sunday
May, 2026

A News 365Times Venture

ಬೀದಿಬದಿ ಆಹಾರ ಸೇವನೆ ಬಿಡಿ: ಸೊಳ್ಳೆಗಳಿಂದ ಆರೋಗ್ಯ ಕಾಪಾಡಿಕೊಳ್ಳಿ- ಪಾಲಿಕೆ ಆರೋಗ್ಯಧಿಕಾರಿ ಸಲಹೆ

Date:

ಮೈಸೂರು,ಮೇ,31,2025 (www.justkannada.in): ಮಳೆಗಾಲದಲ್ಲಿ ಸೊಳ್ಳೆಗಳಿಂದ ಆರೋಗ್ಯ ಕಾಪಾಡಿಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ಬೀದಿಬದಿ ಆಹಾರ ಸೇವಿಸಬೇಡಿ ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಧಿಕಾರಿ ಡಾ. ವೆಂಕಟೇಶ್ ಸಲಹೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯಧಿಕಾರಿ ಡಾ. ವೆಂಕಟೇಶ್, ಈ ಬಾರಿ ಮೈಸೂರಿಗೆ ಉತ್ತಮ ಮಳೆಯಾಗಿದೆ. ಮಳೆಯ ನೀರಿನಿಂದ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ಮಾರಣಾಂತಿಕ ಕಾಯಿಲೆ ಬರುವ ಸಾಧ್ಯತೆಗಳಿವೆ. ನಿಂತ ನೀರಿನಿಂದ ಸೊಳ್ಳೆಗಳ ಸಂತಾನ ಹೆಚ್ಚಾಗಲಿವೆ. ಆದ್ದರಿಂದ ನಾಗರೀಕರು  ಸೊಳ್ಳೆ ಬಾರದ ಹಾಗೆ ಎಚ್ಚರವಹಿಸಿ , ಸ್ವಚ್ಛತೆ ಕಾಪಾಡಿಕೊಳ್ಳಬೇಕು.  ಸದ್ಯ ಕೋವಿಡ್ ಬಗ್ಗೆ ಭಯ ಪಡೋದು ಬೇಡ. ನಾಗರೀಕರು ಎಲ್ಲೆಂದರಲ್ಲಿ ಕಸ ಬೀದಿಗೆ ಹಾಕಬಾರದು. ರಾತ್ರಿ ವೇಳೆ ಬೀದಿಬದಿ ವ್ಯಾಪಾರಸ್ಥರು ಹೆಚ್ಚಾಗಿ ಕಸ ಹಾಕುತ್ತಿದ್ದಾರೆ. ಬಿಸಾಕಿದ ಕಸ ಮಳೆ ನೀರಿಗೆ ಸಿಲುಕಿ ಚರಂಡಿಗೆ ಸೇರಿಕೊಳ್ಳುತ್ತದೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ತೆರಳಲು ಸಾಧ್ಯವಾಗೋದಿಲ್ಲ. ನಮ್ಮೊಂದಿಗೆ ನಗರದ ಜನರು ಸಹಕರಿಸಿ ಎಂದು ಮನವಿ ಮಾಡಿದರು.vtu

ಕಸದ ಸಮಸ್ಯೆ ಇದ್ದರೆ ಪಾಲಿಕೆಗೆ ಒಂದೇ ಒಂದು ಕಾಲ್ ಮಾಡಿ. ಆರೋಗ್ಯದ ದೃಷ್ಟಿಯಿಂದ ಬೀದಿಬದಿ ಆಹಾರ ಸೇವಿಸಬೇಡಿ. ಕಸದ ಸಮಸ್ಯೆ ಎದುರಿಸಲು ನಮ್ಮ ತಂಡ ಸಜ್ಜಾಗಿದೆ. ಕಸ ಕಂಡಲ್ಲಿ ಒಂದೇ ಒಂದು ಫೋಟೋ ಅಥವಾ ಕಾಲ್ ಮಾಡಿ ಮಾಹಿತಿ ನೀಡಿ. ಕೇವಲ ಒಂದೇ ಗಂಟೆಯಲ್ಲೇ ಸಮಸ್ಯೆ ಸರಿಪಡಿಸುತ್ತೇವೆ. ಎಲ್ಲೆಂದರಲ್ಲಿ ಕಸ ಬಿಸಾಕುವವರಿಗೆ ದಂಡ ಹಾಕುತ್ತಿದ್ದೇವೆ. ಕೆಲವು ಗಂಭೀರ ಪ್ರಕರಣವಿದ್ದರೆ ಎಫ್ ಐಆರ್  ಅನ್ನು ದಾಖಲಿಸುತ್ತೇವೆ ಎಂದು ಪಾಲಿಕೆ ಅರೋಗ್ಯಧಿಕಾರಿ ಡಾ ವೆಂಕಟೇಶ್ ಹೇಳಿದರು.

Key words: Protect, health, from, mosquitoes, MCC, health officer

The post ಬೀದಿಬದಿ ಆಹಾರ ಸೇವನೆ ಬಿಡಿ: ಸೊಳ್ಳೆಗಳಿಂದ ಆರೋಗ್ಯ ಕಾಪಾಡಿಕೊಳ್ಳಿ- ಪಾಲಿಕೆ ಆರೋಗ್ಯಧಿಕಾರಿ ಸಲಹೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ – ಸಚಿವ ಸಂತೋಷ್ ಲಾಡ್ ಆಕ್ರೋಶ

ಬೆಂಗಳೂರು, ಮೇ. 2,2026 (www.justkannada.in): ದೊಡ್ಡಬಳ್ಳಾಪುರದ ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುವ...

ಸಿಎಂ ಬದಲಾವಣೆ ಚರ್ಚಿಸುವ ಅವಶ್ಯಕತೆ ಇಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,2,2026 (www.justkannada.in): ಸಿಎಂ ಬದಲಾವಣೆ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ ಎಂದು...

ವಿದ್ಯುತ್‌ ವ್ಯತ್ಯಯ ದೂರಿಗೆ ವಾಟ್ಸ್‌ ಆಪ್‌, ಸಾಮಾಜಿಕ ಜಾಲತಾಣ ಬಳಸಿ: ಬೆಸ್ಕಾಂ ಮನವಿ

ಬೆಂಗಳೂರು,ಮೇ,2,2026 (www.justkannada.in): ವಿದ್ಯುತ್‌ ಸಂಬಂಧಿತ ದೂರುಗಳನ್ನು ದಾಖಲಿಸಲು ವಾಟ್ಸಪ್‌ ಸಹಾಯವಾಣಿ ಸಂಖ್ಯೆಗಳು...

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಬಗೆಹರಿದ ಬಳಿಕ ಗ್ಯಾಸ್ ಸಿಲಿಂಡರ್ ದರ ಇಳಿಕೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಾವಣಗೆರೆ,ಮೇ,2,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ, ಹೋರ್ಮಜ್ ಜಲಸಂಧಿ ಬಿಕ್ಕಟ್ಟಿನಿಂದ ಗ್ಯಾಸ್ ಸಿಲಿಂಡರ್...