ಬೆಂಗಳೂರು,ಜೂನ್,14,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿ ಕೋಮು ನಿಗ್ರಹ ದಳಕ್ಕೆ ಚಾಲನೆ ನೀಡಿರುವುದಕ್ಕೆ ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇದು ಹಿಂದೂಗಳನ್ನ ಬೆದರಿಸುವ ತಂತ್ರ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಇದು ಕೋಮು ನಿಗ್ರಹ ದಳ ಅಲ್ಲ. ಹಿಂದೂಗಳನ್ನ ಬೆದರಿಸುವ ತಂತ್ರ. ಇದಕ್ಕೆ ನಾವು ಬಗ್ಗಲ್ಲ. ಎಲ್ಲವನ್ನೂ ಎದುರಿಸುತ್ತೇವೆ ಎಂದರು.
ಕೇಂದ್ರದಿಂದ ಅನುದಾನ ತಾರತಮ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ದೆಹಲಿಯಲ್ಲಿ ಸಿಎಂ ಅರ್ಧ ಸತ್ಯ ಹೇಳಿದ್ದಾರೆ ಸಿಎಂ ಆರೋಪಗಳು ಸತ್ಯವಲ್ಲ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಆರೋಪ ಮಾಡಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ ಗ್ಯಾರಂಟಿಗಳಿಗೆ ಹಣ ಇಲ್ಲ. ಸಿಎಂ ನೋಡಿದ್ರೆಪಾಪ ಎನ್ನಿಸುತ್ತೆ. ಕೇಂದ್ರದ ಯೋಜನೆಗಳಿಗೂ ಕತ್ತರಿ ಹಾಕಲಾಗಿದೆ ಎಂದು ಆರೋಪಿಸಿದರು.
Key words: Communal Suppression Squad, congress, Government, BY Vijayendra
The post ಕೋಮು ನಿಗ್ರಹ ದಳಕ್ಕೆ ಚಾಲನೆ: ಇದು ಹಿಂದೂಗಳನ್ನ ಬೆದರಿಸುವ ತಂತ್ರ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.