2
July, 2025

A News 365Times Venture

2
Wednesday
July, 2025

A News 365Times Venture

ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ- ಸ್ನೇಹಮಯಿ ಕೃಷ್ಣ

Date:

ಮೈಸೂರು,ಜುಲೈ,1,2025 (www.justkannada.in): ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ ಎಂದು  ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಭವಿಷ್ಯ ನುಡಿದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ,  ಅಧಿಕಾರ ದುರುಪಯೋಗ ಪಡಿಸಿದಕೊಂಡು ಇಲ್ಲಿವರೆಗೆ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಇವತ್ತಲ್ಲ ನಾಳೆ ಅವರು ಜೈಲಿಗೆ ಹೋಗಲೇ ಬೇಕಾದ ಸಂದರ್ಭ ಬಂದೇ ಬರುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆಗೆ ಬೇಕಾದ ಪೂರಕ ಸಾಕ್ಷ್ಯಾಧಾರಗಳ ಒದಗಿಸಿದ್ದೇನೆ. ಸಾಕ್ಷ್ಯಾಧಾರಗಳ ನಾಶ ಮಾಡುವ ಕೆಲಸವನ್ನ ಪೋಲಿಸರಿಂದ ಮಾಡಿಸುತ್ತಿದ್ದಾರೆ. ಸಿಎಂ ತಪ್ಪಿತಸ್ಥರೆಂದು 14 ನಿವೇಶನಗಳ ಹಿಂದಿರುಗಿಸಿದಾಗಲೇ ಜನರಿಗೆ ಗೊತ್ತಾಗಿದೆ. ಕಾದು ನೋಡಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದರು.

ಮುಡಾ ಹಗರಣ ಪ್ರಕರಣದ ಸಂಬಂಧ, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ಆರೋಪಿಸಿ ಜಿ.ಟಿ ಉದೇಶ್ ವರ್ಗಾವಣೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೊರೆ ಹೋಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ಮುಡಾ ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ಮಾಡುತ್ತಿಲ್ಲ. ಸಾಕ್ಷ್ಯಾಧಾರಗಳ ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇವರೇ ಸಹಕರಿಸುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಕೂಡಲೇ ಉದೇಶ್ ರನ್ನ ವರ್ಗಾವಣೆ ಮಾಡಬೇಕು ಎಂದು ನಿನ್ನೆ ಕೋರ್ಟ್ ನಲ್ಲಿ ವಾದ ಮಂಡಿಸಿದ್ದೇನೆ. ವಿಚಾರಣೆಯನ್ನ ಜುಲೈ 15 ಕ್ಕೆ ಮುಂದೂಡಿದ್ದಾರೆ ಎಂದು ತಿಳಿಸಿದರು.vtu

Key words: CM Siddaramaiah, jail , Snehamayi Krishna

The post ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ- ಸ್ನೇಹಮಯಿ ಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಅವಹೇಳನ ಆರೋಪ: ಎನ್.ರವಿಕುಮಾರ್ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹ

ಮೈಸೂರು,ಜುಲೈ,2,2025 (www.justkannada.in): ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ...

ವಿಶೇಷ ಸಚಿವ ಸಂಪುಟ ಸಭೆ: ಬೆಂ.ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆ ಸೇರಿ ಹಲವು ನಿರ್ಣಯ

ಚಿಕ್ಕಬಳ್ಳಾಪುರ,ಜುಲೈ 2,2025 (www.justkannada.in): ಇಂದು ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ...

MYSORE: ಡಾ.ರಂಗನಾಥಯ್ಯ ಎಂಬ “ಸಂತ” ವೈದ್ಯ.

ಮೈಸೂರು,ಜುಲೈ,2,2025 (www.justkannada.in): ಸೌಖ್ಯವಿಲ್ಲ ಎಂದು ತನ್ನಲ್ಲಿಗೆ ಬರುವವರ, ಆರೋಗ್ಯದ ಸ್ಥಿತಿಯನ್ನು  ಅವರ...

ಕಾಲ್ತುಳಿತ ಕೇಸ್: CAT ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರ

ಬೆಂಗಳೂರು, ಜುಲೈ, 2,2025 (www.justkannada.in): ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ...