ಬೆಳಗಾವಿ,ಜುಲೈ,5,2025 (www.justkannada.in): ಜಾತ್ರೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಎಎಸ್ ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಎಎಸ್ ಐ ಮೀರಾನಾಯಕ್ (56) ಹೃದಯಾಘಾತದಿಂದ ಮೃತಪಟ್ಟವರು. ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ಸಲ್ಲಿಸುತ್ತಿದ್ದ ಎಲ್ ಜೆ ಮೀರಾನಾಯಕ್ ಅವರು ಗೋಕಾಕ ಗ್ರಾಮದೇವತೆ ಮಹಾಲಕ್ಷ್ಮಿ ಜಾತ್ರೆಗೆ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದರು.
ಕಳೆದ ನಾಲ್ಕು ದಿನಗಳಿಂದ ಗೋಕಾಕ ಗ್ರಾಮದೇವಿ ಜಾತ್ರೆಗೆ ಅವರನ್ನು ಕರ್ತವ್ಯಕ್ಕೆಂದು ನಿಯೋಜನೆ ಮಾಡಲಾಗಿತ್ತು. ಗೋಕಾಕ ಪಟ್ಟಣದ ಎಸ್ಸಿ ಎಸ್ಟಿ ಬಾಲಕರ ಹಾಸ್ಟೆಲ್ ನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಇಂದು ಮುಂಜಾನೆ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಎಸ್ಪಿ ಡಾ.ಭೀಮಾಶಂಕರ್ ಗುಳೇದ್‌ರವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಗೋಕಾಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: fair duty, ASI, dies, heart attack
The post ಜಾತ್ರೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ASI ಹೃದಯಾಘಾತದಿಂದ ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.