ಬೆಂಗಳೂರು,ಜುಲೈ,7,2025 (www.justkannada.in): ಪ್ರಧಾನಿ ಮೋದಿಗೆ ಕಾಂಪಿಟೇಟರ್ ಆಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.
ಈ ಕುರಿತು ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಸ್ಥಾನ ಬಿಟ್ಟುಕೊಡಬಹುದು. ಸಿದ್ದರಾಮಯ್ಯರನ್ನು ಮನವೊಲಿಸಿ ಡಿಕೆ ಶಿವಕುಮಾರ್ ರನ್ನು ಸಿಎಂ ಮಾಡಬಹುದೇನೋ ಇಲ್ಲವಾದರೆ ಸಿದ್ದರಾಮಯ್ಯರನ್ನ ರಾಷ್ಟ್ರಮಟ್ಟಕ್ಕೆ ಕರೆದೊಯ್ಯುತ್ತಾರೆ.
ಪ್ರಧಾನಿ ಮೋದಿ ಕೂಡ ಒಬಿಸಿ ನಾಯಕರು. ಹೀಗಾಗಿ ಅವರಿಗೆ ಕಾಂಪಿಟ್ ಇಲ್ಲ. ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿಗೆ ಜನಪ್ರಿಯತೆ ಇಲ್ಲ. ಪ್ರಧಾನಿ ಮೋದಿಗೆ ಸಿದ್ದರಾಮಯ್ಯರನ್ನ ಕಾಂಪಿಟೇಟರ್ ಆಗಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ಪ್ರಭಾವಿ ನಾಯಕ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರ್ತಾರೆ ಎಂದು ಶ್ರೀರಾಮುಲು ತಿಳಿಸಿದರು.
Key words: CM, Siddaramaiah, national politics, Sriramulu
The post ಪ್ರಧಾನಿ ಮೋದಿಗೆ ಕಾಂಪಿಟೇಟರ್: ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರ್ತಾರೆ –ಶ್ರೀರಾಮುಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.