24
June, 2026

A News 365Times Venture

24
Wednesday
June, 2026

A News 365Times Venture

ಕನ್ನಡ ಭಾಷೆ ಅಂಕ 100ಕ್ಕೆ ಇಳಿಸುವ ನಿರ್ಧಾರ: ಶಿಕ್ಷಣ ಸಚಿವರ ವಿರುದ್ದ ವಿ.ಸೋಮಣ್ಣ ಕಿಡಿ

Date:

ಬೆಂಗಳೂರು,ಜುಲೈ,9,2025 (www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಅಂಕವನ್ನ 125ರಿಂದ 100ಕ್ಕೆ ಇಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದ್ದು, ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ದ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ವಿ.ಸೋಮಣ್ಣ, ಕನ್ನಡ ಭಾಷೆ ಅಂಕವನ್ನು 125ರಿಂದ 100ಕ್ಕೆ ಇಳಿಸುವ ನಿರ್ಧಾರ ಮೂರ್ಖತನದ ಪರಮಾವಧಿ. ಕನ್ನಡದ ಅಸ್ತಿತ್ವವನ್ನೇ ಪ್ರಶ್ನಿಸುವಂತಿರುವ ನಿರ್ಧಾರವಿದು.  ಇದು ಕನ್ನಡ ಭಾಷೆಗೆ ದ್ರೋಹ ಬಗೆಯುವ ನಿರ್ಧಾರ. ಸರ್ಕಾರಕ್ಕೆ ಕನ್ನಡ ಮೇಲೆ ಎಂತಹ ಪ್ರೀತಿ ಇದೆ ಎಂದು ಗೊತ್ತಾಗುತ್ತದೆ ಕನ್ನಡಕ್ಕೆ ದ್ರೋಹ ಎಸಗುವಂತಹ ಆದೇಶ ತರಲು ಎಷ್ಟು ಧೈರ್ಯ..?   ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು  ಕನ್ನಡ ವಿರೋಧಿ ನಿರ್ಧಾರವನ್ನ ಕೂಡಲೇ ವಾಪಸ್ ಪಡೆದು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ವಿ.ಸೋಮಣ್ಣ ಆಗ್ರಹಿಸಿದ್ದಾರೆ.vtu

Key words: reduce, Kannada language, Marks, State government, V. Somanna

The post ಕನ್ನಡ ಭಾಷೆ ಅಂಕ 100ಕ್ಕೆ ಇಳಿಸುವ ನಿರ್ಧಾರ: ಶಿಕ್ಷಣ ಸಚಿವರ ವಿರುದ್ದ ವಿ.ಸೋಮಣ್ಣ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಎಂ.ಎನ್. ಅನುಚೇತ್ ನೇಮಕ

  ಬೆಂಗಳೂರು, ಜೂನ್ 24: ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್....

OC ವಿನಾಯಿತಿ: ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ  ಅರ್ಜಿ ಸಲ್ಲಿಸಲು  ಜುಲೈ 6 ಗಡುವು

ಬೆಂಗಳೂರು,ಜೂನ್,24,2026 (www.justkannada.in):   ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ ( +ಶೇ....

KPMA ಅಡಿ ನೋಂದಣಿಯಾಗದ ಡಿ-ಅಡಿಕ್ಷನ್ ಕೇಂದ್ರಗಳ ವಿರುದ್ಧ ಕ್ರಮ: ಮೈಸೂರು ಡಿ.ಸಿ ಲಕ್ಷ್ಮಿಕಾಂತ್ ರೆಡ್ಡಿ

ಮೈಸೂರು,ಜೂನ್,24,2026 (www.justkannada.in): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವ್ಯಸನ ವಿಮುಕ್ತ ಕೇಂದ್ರಗಳು (De-addiction...

ಅನಿತಾ ಕುಮಾರಸ್ವಾಮಿ ಜಮೀನು ಬಗ್ಗೆ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,24,2026 (www.justkannada.in):  ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಬಳಿ 100...