ಮೈಸೂರು,ಜುಲೈ,12,2025 (www.justkannada.in) ಸೆಪ್ಟಂಬರ್ ನಂತರ ರಾಜ್ಯ ರಾಜಕಾಣರದಲ್ಲಿ ಕ್ರಾಂತಿ ಆಗಲಿದೆ ಎಂದು ಸಚಿವ ಕೆ.ಎನ್ ರಾಜಣ್ಣ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕರ ತನ್ವೀರ್ ಸೇಠ್, ಕ್ರಾಂತಿ ಯಾವಾಗ ಬೇಕಾದರೂ ಆಗಬಹುದು ಎಂದಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಸಿಎಂ ಬದಲಾವಣೆ ವಿಚಾರ ಕುರಿತು ಮಾಧ್ಯಮಗಳ ಮುಂದೆ ಮಾತನಾಡಲ್ಲ. 5 ವರ್ಷ ಸುಭದ್ರ ಸರ್ಕಾರ ಕೊಡಬೇಕಾದದ್ದು ನಮ್ಮ ಜವಾಬ್ದಾರಿ. ಪಕ್ಷದಿಂದ ಸರ್ಕಾರ ಬಂದಿದೆ ಸರ್ಕಾರದಿಂದ ಪಕ್ಷ ಬಂದಿಲ್ಲ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ ಎಂದರು
ನಾನು 100 ವರ್ಷಗಳ ಕಾಲ ಬದುಕಬೇಕು ಅಂದುಕೊಂಡರೂ ನನ್ನಿಂದ ಅದು ಸಾಧ್ಯಾನಾ ಅಂತ ಯೋಚಿಸಬೇಕು ಮಾರನೆಯ ದಿನ ಬೆಳಗಿನ ಆಗುತ್ತೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ಎಲ್ಲಿವರೆಗೆ ಸಿಎಂ ಆಗಿ ಇರುತ್ತಾರೋ ಅಲ್ಲಿಯವರೆಗೆ ಅವರೇ ನಮ್ಮ ಮುಖ್ಯಮಂತ್ರಿಗಳು. ಅಧಿಕಾರ ಬದಲಾವಣೆ ಸೂತ್ರ ನಮಗೆ ಗೊತ್ತಿಲ್ಲ ವರಿಷ್ಠರ ತೀರ್ಮಾನಕ್ಕೆ ನಾವು ಬದ್ದ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
Key words: politics, revolution, MLA, Tanveer Sait
The post ರಾಜಕಾರಣದಲ್ಲಿ ಯಾವಾಗ ಬೇಕಾದ್ರೂ ‘ಕ್ರಾಂತಿ’ ಆಗಬಹುದು- ಶಾಸಕ ತನ್ವೀರ್ ಸೇಠ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.