4
May, 2026

A News 365Times Venture

4
Monday
May, 2026

A News 365Times Venture

‘ವೈದ್ಯರನ್ನ ಬದಲಾಯಿಸಿ, ಇಲ್ಲಾಂದ್ರೆ ಆಸ್ಪತ್ರೆ ಮುಚ್ಚಿ’: ರೋಗಿಗಳ ಪ್ರತಿಭಟನೆ, ಆಕ್ರೋಶ

Date:

ಮೈಸೂರು,ಜುಲೈ,15,2025 (www.justkannada.in): ಮೈಸೂರಿನಲ್ಲಿ ವೈದ್ಯರೊಬ್ಬರ ವರ್ತನೆಯಿಂದ ಬೇಸತ್ತ ರೋಗಿಗಳು ವೈದ್ಯರ  ವಿರುದ್ಧವೇ  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮೈಸೂರಿನ‌ ಚಾಮರಾಜ ಜೋಡಿರಸ್ತೆಯ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದ ರೋಗಿಗಳೇ ಪ್ರತಿಭಟನೆ ನಡೆಸಿದ್ದು, ವೈದ್ಯರನ್ನ ಬದಲಾಯಿಸಿ, ಇಲ್ಲಾಂದರೆ ಆಸ್ಪತ್ರೆ ಮುಚ್ಚಿ ಎಂದು ಆಸ್ಪತ್ರೆಗೆ ಬೀಗ ಹಾಕಲು ಯತ್ನಿಸಿದ ಘಟನೆ ನಡೆದಿದೆ.

ವೈದ್ಯೆ ಡಾ.ಮಹಾಲಕ್ಷ್ಮಿ‌ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರು ರೋಗಿಗಳ ಜೊತೆ ಸರಿಯಾಗಿ ಸ್ಪಂದಿಸಲ್ಲ. ಚಿಕಿತ್ಸೆ ನೀಡುವ ಬದಲು ರೋಗಿಗಳಿಗೆ ಬಯ್ಯುತ್ತಾರೆ. ಸೌಜನ್ಯದಿಂದ ವರ್ತಿಸದೆ ದುರಹಂಕಾರ ತೋರುತ್ತಾರೆ ಎಂದು ಕಿಡಿಕಾರಿದ್ದಾರೆ.  ಅಲ್ಲದೆ ಸ್ಥಳಕ್ಕೆ ಡಿಎಚ್ಓ ಆಗಮಿಸುವಂತೆ ಬಿಗಿಪಟ್ಟು ಹಿಡಿದರು.

ವಿಷಯ ತಿಳಿದು ಆಸ್ಪತ್ರೆ  ದೌಡಾಯಿಸಿದ ಡಿಎಚ್ ಓ ಕುಮಾರಸ್ವಾಮಿ ತಕ್ಷಣ ವೈದ್ಯರನ್ನ ಬದಲಾಯಿಸುವ ಭರವಸೆ ನೀಡಿದರು. ಆದರೂ ಪ್ರತಿಭಟನೆಗೆ ಬಂದಿದ್ದ ರೋಗಿಗಳು ಚಿಕಿತ್ಸೆ ಪಡೆಯದೆ ವಾಪಸ್ ತೆರಳಿದ್ದಾರೆ.vtu

Key words: doctor, hospital, Patients, protest, Mysore

The post ‘ವೈದ್ಯರನ್ನ ಬದಲಾಯಿಸಿ, ಇಲ್ಲಾಂದ್ರೆ ಆಸ್ಪತ್ರೆ ಮುಚ್ಚಿ’: ರೋಗಿಗಳ ಪ್ರತಿಭಟನೆ, ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ...

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...

ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...

ಮೂರು ರಾಜ್ಯಗಳಲ್ಲಿ ಬಿಜೆಪಿ ಕಮಾಲ್: ಪ.ಬಂಗಾಳದಲ್ಲಿ ದೀದಿಯ ಟಿಎಂಸಿಗೆ ಹಿನ್ನಡೆ

ಕೋಲ್ಕತ್ತಾ,ಮೇ,4,2026 (www.justkannada.in): ಇಂದು  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಐದು ರಾಜ್ಯಗಳಲ್ಲಿಯೂ...