30
August, 2025

A News 365Times Venture

30
Saturday
August, 2025

A News 365Times Venture

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ: ಮಾಧ್ಯಮ ಮುಖ್ಯಸ್ಥರ ಸಭೆಯಲ್ಲಿ ಉಪ ಸಮಿತಿಗಳ ರಚನೆಗೆ ನಿರ್ಧಾರ

Date:

ಮೈಸೂರು,ಜುಲೈ,24,2025 (www.justkannada.in): ಶತಮಾನದ ಹಾದಿಯಲ್ಲಿರುವ ಪ್ರತಿಷ್ಠಿತ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮುಂದಿನ ಹೆಜ್ಜೆಗಳು, ಸಂಘದ ಅಭಿವೃದ್ಧಿ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ಪತ್ರಿಕೆಗಳ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರು, ಮುಖ್ಯಸ್ಥರ ವಿಶೇಷ ಸಭೆಯನ್ನು ಇಂದು ಪತ್ರಕರ್ತರ ಭವನದಲ್ಲಿ ನಡೆಸಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಂಘದ ನೂತನ ಭವನ ನಿರ್ಮಾಣ, ಪತ್ರಕರ್ತರಿಗೆ ಆರೋಗ್ಯ ರಕ್ಷಣೆ, ಸಂಘದ ಬೈಲಾ ಪರಾಮರ್ಶೆ, ಪ್ರತಿಷ್ಠಿತ ಪ್ರಶಸ್ತಿಗಳ ಸ್ಥಾಪನೆ, ವೃತ್ತಿ ಕೌಶಲ್ಯ ವೃದ್ಧಿಗೆ ತಿಂಗಳ ಕಾರ್ಯಕ್ರಮ ಆಯೋಜನೆ, ಗ್ರಂಥಾಲಯದ ಪುನಾರಾರಂಭ ಸಂಬಂಧ ಎಲ್ಲ ಹಿರಿಯ ಪತ್ರಕರ್ತರು ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲರ ಒಳಗೊಳ್ಳುವಿಕೆಯಲ್ಲಿ ಈ ಮೇಲಿನ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉಪ ಸಮಿತಿಗಳನ್ನು ರಚಿಸುವ ನಿರ್ಧಾರಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷರೂ ಕನ್ನಡ ಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷರೂ ಪ್ರತಿನಿಧಿ ಪತ್ರಿಕೆಯ ಸಂಪಾದಕ ಸಿ.ಕೆ.ಮಹೇಂದ್ರ, ಪ್ರಜಾವಾಣಿ ಪತ್ರಿಕೆಯ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಆಂದೋಲನ ದಿನಪತ್ರಿಕೆಯ ಸಂಪಾದಕ ರವಿ ಕೋಟಿ, ಮೈಸೂರು ದಿಗಂತ ಪತ್ರಿಕೆಯ ಸಂಪಾದಕ ಮಳಲಿ ನಟರಾಜಕುಮಾರ್, ಮೈಸೂರು ಮಿತ್ರ ಪತ್ರಿಕೆಯ ಸುದ್ದಿ ಸಂಪಾದಕ ಎ.ಸಿ.ಪ್ರಭಾಕರ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮುಖ್ಯಸ್ಥ ಸತೀಶ್, ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯಸ್ಥ ರಮೇಶ್ ಉತ್ತಪ್ಪ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮುಖ್ಯಸ್ಥ ಅರವಿಂದ್ , ವಿಜಯವಾಣಿ ಪತ್ರಿಕೆಯ ಮುಖ್ಯಸ್ಥ ಎಂ.ಆರ್. ಸತ್ಯನಾರಾಯಣ, ಜಸ್ಟ್ ಕನ್ನಡ ಸುದ್ದಿ ಸಂಸ್ಥೆಯ ಮುಖ್ಯಸ್ಥ ಮಹೇಶ್ ಕೊಳ್ಳೇಗಾಲ, ಹಿರಿಯ ಪತ್ರಕರ್ತ ಉಮೇಶ್ ಭಟ್, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಟಿವಿ9 ಸುದ್ದಿ ವಾಹಿನಿಯ ರಾಮ್, ಪಬ್ಲಿಕ್ ಟಿವಿ ವಾಹಿನಿಯ ಕೆ.ಪಿ.ನಾಗರಾಜ್, ದೂರದರ್ಶನದ ಜಯಂತ್, ರಾಜ್ಯ ಸಂಘದ ನಿರ್ದೇಶಕರಾಗಿ ಬಿ.ರಾಘವೇಂದ್ರ ಭಾಗವಹಿಸಿ ಉಪಯುಕ್ತ ಸಲಹೆಗಳನ್ನು ನೀಡಿದರು.

ಸಭೆಯ ಆರಂಭದಲ್ಲಿ ಪ್ರತಿನಿಧಿ ಪತ್ರಿಕೆಯ ಮಾಲೀಕರೂ, ಜಿಎಸ್‌ಎಸ್ ಸಂಸ್ಥೆಯ ಮುಖ್ಯಸ್ಥ  ಶ್ರೀಹರಿ ದ್ವಾರಕಾನಾಥ್ ಅವರು, ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರಿಯಾಯ್ತಿ ದರದಲ್ಲಿ ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಮತ್ತು ಆರೋಗ್ಯ ವಿಮೆ ವ್ಯಾಪ್ತಿಗೆ ಪತ್ರಕರ್ತರನ್ನು ಒಳಪಡಿಸುವ ಬಗ್ಗೆ ವಿಷಯ ಮಂಡಿಸಿದರು. ಇದಕ್ಕೂ ಮೊದಲು ಸಭೆಯಲ್ಲಿ ಉಪಸ್ಥಿತರಿದ್ದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಅವರು ಎಲ್ಲರನ್ನು ಸ್ವಾಗತಿಸಿ, ಸಭೆಯ ಉದ್ದೇಶ ಮತ್ತು ಕಾರ್ಯಸೂಚಿಯನ್ನು ಮಂಡಿಸಿದರು.  ಸಭೆಯ ಕೊನೆಯಲ್ಲಿ ಮಾತನಾಡಿದ ಅಧ್ಯಕ್ಷ ಕೆ.ದೀಪಕ್, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಮತ್ತು ಕೊಡುಗೆಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ಪ್ರಭುರಾಜನ್, ಎಂ.ಸುಬ್ರಹ್ಮಣ್ಯ, ವರ್ತಮಾನ ಪತ್ರಿಕೆಯ ಸಂಪಾದಕ ಕೆ.ಎನ್.ರವಿ, ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರ ಮಧುಸೂದನ್, ರಾಜ್ಯಧರ್ಮ ಪತ್ರಿಕೆಯ ಸಂಪಾದಕರಾದ ಕವಿತಾ, ಉದಯವಾಣಿ ವರದಿಗಾರ ವೀರೇಂದ್ರ ಪ್ರಸಾದ್, ವಾರ್ತಾ ಭಾರತಿ ವರದಿಗಾರ  ಸತಿಶ್‌ಕುಮಾರ್, ರೈತನಾಡು ಪತ್ರಿಕೆಯ ಸಂಪಾದಕ ನಜೀರ್, ನಿಜದನಿ ಪತ್ರಿಕೆಯ ಸಂಪಾದಕ ಸುನಿಲ್, ನಗರ ಬೆಳಕು ಪತ್ರಿಕೆಯ ಸಂಪಾದಕ ಸುವರ್ಣ, ಶ್ರೀ ಟಿವಿಯ ಮುಖ್ಯಸ್ಥ ಸೂರ್ಯ, ಪ್ರಜಾಸತ್ಯ ಪತ್ರಿಕೆಯ ನಾಣಿ, ಪತ್ರಕರ್ತರಾದ ಕೆ.ಎನ್. ನಾಗಸುಂದರಪ್ಪ, ಕುಮಾರ್, ಕಿರಣ್, ರಾಘವೇಂದ್ರ ಸ್ವಾಮಿ, ಆನಂದ್, ಅಫ್ಸರ್ ಪಾಷ, ರಂಗಸ್ವಾಮಿ, ಘನವಂತ್, ಕುಮಾರ್ ಹಾಗೂ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ, ಕಾರ್ಯದರ್ಶಿ ಕೃಷ್ಣೋಜಿ ರಾವ್, ಆಡಳಿತ ಮಂಡಳಿಯ ಸದಸ್ಯರಾದ ರಾಜಣ್ಣ, ಸೋಮಶೇಖರ್ ಚಿಕ್ಕಮರಳ್ಳಿ, ಹನಗೋಡು ನಟರಾಜ್, ಹುಲ್ಲಹಳ್ಳಿ ಮೋಹನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸಂಘದಿಂದ ಕೃತಜ್ಞತೆ 

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ವೃತ್ತಿಪರತೆ ಹೆಚ್ಚಿಸುವ ನಿಟ್ಟಿನಲ್ಲಿ ಇಂದು ಕರೆಯಲಾಗಿದ್ದ ವಿಶೇಷ ಸಭೆಗೆ ಆಗಮಿಸಿ ಉಪಯುಕ್ತ ಸಲಹೆ ಮತ್ತು ಒಳಗೊಳ್ಳುವಿಕೆಯ ಭರವಸೆ ನೀಡಿದ ಮಾಧ್ಯಮ ಸಂಸ್ಥೆಗಳ ಎಲ್ಲ ಸಂಪಾದಕರು, ಮುಖ್ಯಸ್ಥರು, ಜಿಲ್ಲಾ ವರದಿಗಾರರು, ಛಾಯಾಗ್ರಾಹಕರಿಗೆ ಸಂಘದ ಅಧ್ಯಕ್ಷ ಕೆ.ದೀಪಕ್ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.vtu

Key words: Mysore District Journalists Association, Meeting, sub-committees

The post ಮೈಸೂರು ಜಿಲ್ಲಾ ಪತ್ರಕರ್ತರ ಸಂಘ: ಮಾಧ್ಯಮ ಮುಖ್ಯಸ್ಥರ ಸಭೆಯಲ್ಲಿ ಉಪ ಸಮಿತಿಗಳ ರಚನೆಗೆ ನಿರ್ಧಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...