ಬೆಂಗಳೂರು,ಜುಲೈ,25,2025 (www.justkannada.in): ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅಂಚೆಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸ್ಪಂದನಾ (24) ಮೃತ ಮಹಿಳೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ಭೀಮನ ಅಮಾವಾಸ್ಯೆ ದಿನವೇ ಸ್ಪಂದನ ಸಾವನ್ನಪ್ಪಿದ್ದು ಇದೀಗ ಪತಿ ಅಭಿಷೇಕ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಪಂದನಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಮತ್ತು ಕುಟುಂಬಸ್ಥರ ವಿರುದ್ದ ಕಿರುಕುಳ ಆರೋಪ ಕೇಳಿ ಬಂದಿದೆ. ಸಾವಿಗೂ ಮೊದಲು ತಂಗಿಗೆ ವಾಟ್ಸಪ್ ಮೆಸೇಜ್ ಮಾಡಿದ್ದ ಸ್ಪಂದನಾ, ನನ್ನ ಸಾವಿಗೆ ಅಭಿ ಅವರ ಕುಟುಂಬವೇ ಕಾರಣ , ಕೆಲಸ ಮಾಡುವ ಕಚೇರಿಯಲ್ಲಿರುವವರೂ ಕಾರಣ ಎಂದು ಹೇಳಿದ್ದಳು ಎನ್ನಲಾಗಿದೆ.
ಮೃತ ಸ್ಪಂದನ ಕನಕಪುರದ ಕಾಂಗ್ರೆಸ್ ಮುಖಂಡ ಚಂದ್ರು ಅವರ ಪುತ್ರಿಯಾಗಿದ್ದು 2024 ರಲ್ಲಿ ಪೋಷಕರ ವಿರೋಧದ ನಡುವೆಯೂ ಅಭಿಷೇಕ್ ಮತ್ತು ಸ್ಪಂದನಾ ಮದುವೆಯಾಗಿದ್ದರು.
Key words: Woman, dies, suspiciously, husband, arrested
The post ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದ ಸಾವು; ಪತಿಯ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.